Share this news

 

 

ಹೆಬ್ರಿ,ಡಿ.30: ಹೆಬ್ರಿಯಲ್ಲಿ ನೂತನವಾಗಿ ಅಲಯನ್ಸ್ ಕ್ಲಬ್ ಮತ್ತು ಮಹಿಳಾ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಉದ್ಘಾಟನೆ ಮತ್ತು ಪದಪ್ರಧಾನ ಕಾರ್ಯಕ್ರಮವು ಹೆಬ್ರಿ ಶ್ರೀ ಅನಂತಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಡಿ. 26 ರಂದು ನಡೆಯಿತು.

ನೂತನ ಪದಾಧಿಕಾರಿಗಳಿಗೆ , ನೂತನ ಸದಸ್ಯರಿಗೆ, ಪ್ರತಿಜ್ಞಾವಿಧಿ ಭೋಧಿಸಲಾಯಿತು. ಮೈತ್ರಿ ಪ್ರತಿಜ್ಞೆ, ಅಲಯನ್ಸ್ ಪ್ರಾರ್ಥನೆ ಮಾಡಲಾಯಿತು.

ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ನಿರ್ದೇಶಕರಾದ ಅಲೈ ನಾಗರಾಜ ವಿ ಬಾಯರಿ ಯವರು ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಉದ್ಘಾಟನೆ ಮತ್ತು ಪದ ಪ್ರಧಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಜನ ಸೇವೆಗೆ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಉತ್ತಮ ಸಂಸ್ಥೆ ಯಾಗಿದೆ. ನಿಸ್ವಾರ್ಥ ಸೇವೆಗೆ ಅವಕಾಶವಿದ್ದು ಇದರ ಧ್ಯೇಯ ಉದ್ದೇಶಗಳಾದ ಅರೋಗ್ಯ ಶಿಬಿರ, ಜನ ಜಾಗೃತಿ,ಅನಾಥಶ್ರಮ, ನಿರ್ಗತಿಕರಿಗೆ ನೆರವು, ಸಮಾಜ ಸೇವೆ ಮುಂತಾದ ಕಾರ್ಯ ಚಟುವಟಿಕೆಗಳು ನಡೆಯಲಿದ್ದು, ಹೆಬ್ರಿಅಲಯನ್ಸ್ ಕ್ಲಬ್ ಗಳು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲಿದೆ. ಹೆಬ್ರಿಯ ನೂತನ ಕ್ಲಬ್ ಗಳು ಈ ಭಾಗದಲ್ಲಿ ಸಾಮಾನ್ಯ ಜನರು, ಸಮಾನ ಮನಸ್ಕರು ಸದಸ್ಯರಾಗುವ ಮೂಲಕ ಬೆಂಬಲಗಳಿಸಿ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ ಎಂದರು.

ಹೆಬ್ರಿ ಅಲಯನ್ಸ್ ಕ್ಲಬ್ ನ ಅಧ್ಯಕ್ಷ ರಾದ ಕೆ. ರಾಮಚಂದ್ರ ಭಟ್ ರವರ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನೆರವೇರಿತು. ಶಾಲೆಗಳಿಗೆ ಪ್ರಥಮ ಚಿಕಿತ್ಸೆ ಕಿಟ್ ಹಾಗೂ ಗುರುತಿನ ಕಾರ್ಡ್ ವಿತರಣೆ ನಡೆಯಿತು.
ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಯವರಾದ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಸಂಘಟನೆ ಬಗ್ಗೆ ಮಾಹಿತಿ ನೀಡಿದರು.
ಅಲಯನ್ಸ್ ಕ್ಲಬ್ 275 S ಇದರ ಜಿಲ್ಲಾ ಗವರ್ನರ್ ಸುನಿಲ್ ಎನ್. ಸಾಲಿಯಾನ್, ಪ್ರಥಮ ಉಪ ಜಿಲ್ಲಾ ಗವರ್ನರ್ ಅಲೈ ಸುನಿಲ್ ಕುಮಾರ್ ಶೆಟ್ಟಿ , ದ್ವಿತೀಯ ಉಪ ಜಿಲ್ಲಾ ಗವರ್ನರ್ ಕೆ. ಸುಧಾಕರ ಹೆಗ್ಡೆ, ಸಂಪುಟ ಕಾರ್ಯದರ್ಶಿ ಜಗದೀಶ್ ಹೊಳ್ಳ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯರಾಮ ಆಚಾರ್ಯ, ಇಂಟರ್ನ್ಯಾಷನಲ್ ಕಮಿಟಿ ಸದಸ್ಯರಾದ ಆಲೈ ಮುನಿಯಪ್ಪ ಮೈಸೂರು, ಅಲಯನ್ಸ್ ಇಂಟರ್ನೇಷನಲ್ ಕಮಿಟಿ ಸದಸ್ಯರಾದ ಶ್ರೀಧರ್ ಶೇನವ, ವಲಯ ಅಧ್ಯಕ್ಷರಾದ ಡಾ. ಸಂತೋಷ್ ಕುಮಾರ್ ಬೈಲೂರು, ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಅಧ್ಯಕ್ಷರಾದ ಸುನೀತ ಹೆಬ್ಬಾರ್, ಕಾರ್ಯದರ್ಶಿ ರಮ್ಯಕಾಂತಿ, ಕೋಶಾಧಿಕಾರಿ ಅಮೃತ, ಅಲಯನ್ಸ್ ಕ್ಲಬ್ ಹೆಬ್ರಿ ಇದರ ಕೋಶಾಧಿಕಾರಿ ಸುರೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಅಲೈ ಸುನೀತ ಹೆಬ್ಬಾರ್ ಸ್ವಾಗತಿಸಿ, ಅಲೈ ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿ, ಅಲೈ ಕಾರ್ಯದರ್ಶಿ ಬಾಲಚಂದ್ರ ಎಂ ವಂದಿಸಿದರು.

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *