
ಹೆಬ್ರಿ ,ಜ. 9: ಹೆಬ್ರಿ ಸೇವಾ ಸಂಗಮ ಶಿಶುಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ನಡೆಯಿತು.
ಮುಖ್ಯಅತಿಥಿ ನಿವೃತ್ತ ಶಿಕ್ಷಕಿ ಅರುಣಾ.ಎಸ್ ಪ್ರಭು ಆಗಮಿಸಿ ಮಕ್ಕಳ ಜೊತೆ ಸಂಭಾಷಣೆ ಮಾಡಿ ಹಿತವಚನ ಹೇಳಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಕ ಸಮಿತಿ ಸದಸ್ಯೆ ಪಲ್ಲವಿ ನಾಯಕ್ ಹಾಗೂ ಶಿಶುಮಂದಿರದ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಮಾತಾಜಿ ಉಪಸ್ಥಿತರಿದ್ದರು. ಶಿಕ್ಷಕಿ ಮಲ್ಲಿಕಾ ಮಾತಾಜಿ ಸ್ವಾಗತಿಸಿ, ಅನಿತಾ ಮಾತಾಜಿ ಧನ್ಯವಾದವನ್ನಿತ್ತರು. ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

.
.
