Share this news

ಕಾರ್ಕಳ,ಜ.09: ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕಿನ ಆವರಣ ಹಾಗೂ ಸುತ್ತಮುತ್ತಲಿನಲ್ಲಿ ಹುಲ್ಲು ಹಾಗೂ ಕಳೆಗಿಡಗಳು ಬೆಳೆದಿದ್ದು, ಈ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಈ ಯೋಜನೆಯ ಕಾಮಗಾರಿ ನಿರ್ವಹಿಸಿದ್ದ ನಿರ್ಮಿತಿ ಕೇಂದ್ರದ ಉಸ್ತುವಾರಿಯಲ್ಲಿ ಕಾರ್ಕಳ ನಗರ ಪೊಲೀಸರ ಭದ್ರತೆಯೊಂದಿಗೆ ಶುಕ್ರವಾರದಿಂದ ಸ್ವಚ್ಚತಾ ಕಾರ್ಯ ಆರಂಭಗೊAಡಿದೆ.ಪರಶುರಾಮ ಥೀಮ್ ಪಾರ್ಕಿನ ಆವರಣ, ವೀಕ್ಷಕರ ಗ್ಯಾಲರಿ, ರಂಗ ಮಂದಿರ ಹಾಗೂ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಕಾರ್ಯ ನಡೆಯುತ್ತಿದೆ.

ಪರಶುರಾಮ ಥೀಮ್ ಪಾರ್ಕಿನ ವಿಚಾರಣೆ ಸಿಓಡಿ ಹಾಗೂ ಹೈಕೋರ್ಟ್ ನಲ್ಲಿರುವ ಕಾರಣದಿಂದ ಸಾರ್ವಜನಿಕರ ವತಿಯಿಂದ ಸ್ವಚ್ಚತಾ ಕಾರ್ಯಕ್ಕೆ ಅವಕಾಶವಿಲ್ಲ ಇಲಾಖಾ ವತಿಯಿಂದಲೇ ಸ್ವಚ್ಚತಾ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.ನಿಯಮಾವಳಿ ಉಲ್ಲಂಘಿಸಿ ಸಾರ್ವಜನಿಕರು ಪ್ರವೇಶಿಸಿದರೆ ಅವರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಲಾಗಿದೆ. ಇದಲ್ಲದೇ ಥೀಮ್ ಪಾರ್ಕಿನಲ್ಲಿ ಬೆಲೆ ಬಾಳುವ ಸೊತ್ತುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕಾವಲು ಸಿಬ್ಬಂದಿ ಹಾಗೂ ಸಿಸಿ ಕ್ಯಾಮರಾ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *