
ಮುಂಬಯಿ, ಜ.16: ದೇಶದ ಗಮನಸೆಳೆದಿರುವ ಬ್ರಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ ಮಹಾಯುತಿಗೆ( 130 ಸ್ಥಾನ) ಭಾರೀ ಮುನ್ನಡೆ ಲಭಿಸಿದ್ದು, ಬಹುತೇಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತವಾಗಿದೆ. ಇತ್ತ ಭಿನ್ನಾಭಿಪ್ರಾಯ ಮರೆತು ಒಂದಾದ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಬಣಕ್ಕೆ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಬಿಜೆಪಿ ಮೈತ್ರಿಕೂಟಕ್ಕೆ ಸ್ಪರ್ಧೆ ನೀಡಿದೆ. ಆದರೆ ರಾಷ್ಟಿçÃಯ ಪಕ್ಷ ಕಾಂಗ್ರೆಸ್ ಪಕ್ಷದ ಸ್ಥಿತಿ ಮಾತ್ರ ಅಯೋಮಯವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬAತಾಗಿದೆ.
ಬಿಜೆಪಿ-ಶಿವಸೇನೆ(ಶಿಂಧೆ)-ಎನ್ಸಿಪಿ (ಅಜಿತ್) ಮೈತ್ರಿಕೂಟದ ಒಟ್ಟು 68 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ 44 ಬಿಜೆಪಿ ಅಭ್ಯರ್ಥಿಗಳಾದರೆ, 22 ಮಂದಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯವರು ಮತ್ತು ಇಬ್ಬರು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಅಭ್ಯರ್ಥಿಗಳು.
ಬಹುತೇಕ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳು ನಾಮಪತ್ರ ಹಿಂಪಡೆಯುವ ಮೂಲಕ ಮಹಾಯುತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯನ್ನು ಖಂಡಿಸಿರುವ ಪ್ರತಿಪಕ್ಷಗಳು ಆಡಳಿತ ಪಕ್ಷವು ತೋಳ್ಬಲ ಮತ್ತು ಹಣಬಲದ ಮೂಲಕ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ಆರೋಪಿಸಿವೆ. ಒಟ್ಟಾರೆಯಾಗಿ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ರಿಸಲ್ಟ್ ವಿಳಂಬವಾಗುವ ಸಾಧ್ಯತೆ
ಮತ ಎಣಿಕೆಯಲ್ಲಿ ತಾಂತ್ರಿಕ ಬದಲಾವಣೆಗಳು ಮತ್ತು ಹೊಸ ವ್ಯವಸ್ಥೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ, ಮುಂಬೈನ 227 ವಾರ್ಡ್ಗಳ ಫಲಿತಾಂಶ ತಡವಾಗಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಮುನ್ಸಿಪಲ್ ಕಮಿಷನರ್ ಭೂಷಣ್ ಗಗ್ರಾನಿ ತಿಳಿಸಿದ್ದಾರೆ. ಮುಂಬೈನಲ್ಲಿ ಮತದಾನದ ಪ್ರಮಾಣ ಈ ಬಾರಿ ಕುಸಿದಿದೆ. 2012ರಲ್ಲಿ ಶೇ. 44.75 , 2017ರಲ್ಲಿ ದಾಖಲೆ ಮಟ್ಟದ ಶೇ.55.28 ಮತದಾನವಾಗಿದ್ದರೆ, ಈ ಬಾರಿ ಅದು ಶೇ.52.94% ಕ್ಕೆ ಇಳಿಕೆಯಾಗಿದೆ.ಆದರೆ ಮತ ಎಣಿಕೆಗೂ ಮುನ್ನವೇ ಬಹುತೇಕ ಎಲ್ಲಾ ಸಮೀಕ್ಷೆಗಳು ಮಹಾಯುತಿಗೆ ಸ್ಪಷ್ಟ ಬಹುಮತ ಕೊಟ್ಟಿವೆ.

.
.
.
.
