Share this news

 

ಕಾರ್ಕಳ,ಜ.18: ರೈಡ್ ಫಾರ್ ರೋಟರಿ ಕಾರ್ಯಕ್ರಮದ ಅಂಗವಾಗಿ ಹತ್ತು ದೇಶಗಳಿಂದ ಆಗಮಿಸಿದ್ದ ಮೂವತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ರೋಟೇರಿಯನ್‌ಗಳು ಕಾರ್ಕಳ ರೋಟರಿ ಕ್ಲಬ್‌ನ ಆತಿಥ್ಯವನ್ನು ಪಡೆದರು.ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಕಳದ ಶೀತಲ್ ಗಾರ್ಡನ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಆತಿಥ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರೊಮೇನಿಯಾ, ಆಸ್ಟ್ರಿಯಾ, ಜರ್ಮನಿ, ಕೆನಡಾ, ಸ್ವೀಡನ್, ನಾರ್ವೆ, ಬೆಲ್ಜಿಯಂ, ಪೋಲಂಡ್, ನೆದರ್‌ಲ್ಯಾಂಡ್ ಹಾಗೂ ಡೆನ್ಮಾರ್ಕ್ ದೇಶಗಳಿಂದ ಬಂದ ರೋಟೇರಿಯನ್ ರೈಡರ್ಸ್‌ಗಳು ಹಾಗೂ ಅವರೊಂದಿಗೆ ಆಗಮಿಸಿದ ರೋಟರಿ ಡಿಸ್ಟ್ರಿಕ್ಟ್ 3182ರ ಸದಸ್ಯರು ಆತಿಥ್ಯವನ್ನು ಸ್ವೀಕರಿಸಿ ಕಾರ್ಕಳ ರೋಟರಿ ಕ್ಲಬ್‌ನ ಸಂಘಟನಾ ಸಾಮರ್ಥ್ಯ ಹಾಗೂ ಆತ್ಮೀಯತೆಯನ್ನು ಮೆಚ್ಚಿದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ರೋಟೇರಿಯನ್‌ಗಳು ಮತ್ತು ಕಾರ್ಕಳ ರೋಟರಿ ಕ್ಲಬ್ ನಡುವಿನ ಸ್ನೇಹದ ಸಂಕೇತವಾಗಿ ಫ್ಲಾಗ್ ಎಕ್ಸ್ಚೇಂಜ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ PdG ಡಾ. ಭರತೇಶ ಆದಿರಾಜ್, ಹರಿಪ್ರಕಾಶ್ ಶೆಟ್ಟಿ, ಜಾನ್ ಆರ್. ಡಿ’ಸಿಲ್ವಾ, ರೇಖಾ ಉಪಾಧ್ಯಾಯ, ಸುರೇಶ್ ನಾಯಕ್, ವಸಂತ ಎಂ., ಇಕ್ಬಾಲ್ ಅಹ್ಮದ್, ಚೇತನ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *