
ಕಾರ್ಕಳ,ಜ.22: ತಾಲೂಕಿನ ಅಜೆಕಾರಿನಲ್ಲಿ ರಸ್ತೆ ಬದಿ ನಿಂತಿದ್ದ ಮಕ್ಕಳಿಬ್ಬರಿಗೆ ಟೆಂಪೋ ಡಿಕ್ಕಿಯಾಗಿ ಗಂಭಿರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಜೆಕಾರು ಮಸೀದಿ ಬಳಿ ಜ.21 ರಂದು ಸಂಜೆಯ ವೇಳೆಗೆ ಮಸೀದಿಯ ಮದರಸಕ್ಕೆ ಬಂದಿದ್ದ 6 ವರ್ಷದ ಫಾತಿಮತ್ ಸಮ್ರೀನ ಮತ್ತು 10 ವರ್ಷದ ಫಾತಿಮತ್ ಸನ ಎಂಬ ಇಬ್ಬರು ಮಕ್ಕಳು ರಸ್ತೆ ಬದಿ ನಿಂತಿದ್ದಾಗ ಕಾರ್ಕಳ ಕಡೆಯಿಂದ ಅಜೆಕಾರಿಗೆ ಬರುತ್ತಿದ್ದ ಟೆಂಪೋ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಮಕ್ಕಳಿಬ್ಬರೂ ಗಾಯಗೊಂಡಿದ್ದು ಕಾರ್ಕಳ ಟಿ.ಎಮ್.ಎ ಪೈ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಫಾತಿಮತ್ ಸಮ್ರೀನಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
