
ಕಾರ್ಕಳ,22: ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಬಂಗರೋಡಿ ಎಂಬಲ್ಲಿ ಅಕ್ರಮ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದು ಆಟಕ್ಕೆ ಬಳಸಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‌ಐ(ತನಿಖೆ) ಅವರಿಗೆ ಜ.21 ಸಂಜೆ ನಲ್ಲೂರು ಗ್ರಾಮದ ಅಡಿಕೆ ತೋಟದ ಮಧ್ಯೆ ಶಾಮಿಯಾನಾ ಹಾಕಿ ಖುರ್ಚಿ ಮತ್ತು ಟೇಬಲ್‌ಗಳನ್ನು ಇಟ್ಟು ಸಾರ್ವಜನಿಕರನ್ನು ಸೇರಿಸಿಕೊಂಡು ಕೋಳಿ ಅಂಕ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ ಪೊಲೀಸರು ಸ್ಥಳದಲ್ಲಿದ್ದ ಶಿರ್ವ ಗ್ರಾಮದ ರವಿ, ಸತೀಶ್, ಸ್ಟೀಫನ್, ಮುಲ್ಕಿ ಕೊಡಮಾಲ ಗ್ರಾಮದ ಅಡಿಗಪ್ಪ, ಉದ್ಯಾವರದ ಅಪ್ಪು ಹಾಗು ಸಂದೀಪ್‌ಎಂಬವರನ್ನು ವಶಕ್ಕೆ ಪಡೆದು, ಕೋಳಿ ಅಂಕ ಜೂಜಾಟಕ್ಕೆ ಬಳಸಿದ ಹುಂಜ ಕೋಳಿಗಳು-4, 3,000 ರೂ. ನಗದು, ಬಾಳು ಕತ್ತಿ 2, ಹುಂಜಾ ಕೋಳಿಗಳ ಕಾಲಿಗೆ ಕಟ್ಟಿದ ಹಗ್ಗ 4, ಹುಂಜಾ ಕೋಳಿಗಳ ಕಾಲಿಗೆ ಬಾಲು ಕಟ್ಟಿದ ಹಗ್ಗ 2, ಅಂದಾಜು 2,50,000 ಮೌಲ್ಯದ ಸ್ವಿಪ್ಟ್ ಡಿಜಾಯರ್ ಕಾರು-1, ಶಾಮಿಯಾನ-2, ಶಾಮಿಯಾನ್ ಕಬ್ಬಿಣದ ಕಂಬ 4, ಸ್ಟೀಲಿನ ಟೇಬಲ್ 4, ಪ್ಲಾಸ್ಟಿಕ್ ಕುರ್ಚಿ-25 ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

.
.
.
.
