
ಹೆಬ್ರಿ,ಜ. 23: ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಸವಾರ ಮತ್ತು ಸಹಸವಾರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವರಂಗದ ಸುದರ್ಶನ್ ಶೆಟ್ಟಿ ಎಂಬವರು ತನ್ನ ಅಣ್ಣ ದಿನೇಶ್ ಶೆಟ್ಟಿ ಅವರೊಂದಿಗೆ ಬೈಕಿನಲ್ಲಿ ಮುನಿಯಾಲಿನಿಂದ ಹೆಬ್ರಿ ಕಡೆಗೆ ಮುದ್ರಾಡಿ ಗ್ರಾಮದ ಕೆಲಕಿಲ ಮೆಸ್ಕಾಂ ಕಚೇರಿ ಬಳಿ ನಾಯಿಗಳು ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
