
ಹೆಬ್ರಿ ,ಜ.24: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಸಂತ ಪಂಚಮಿ ಪೂಜೆಯನ್ನು ನಡೆಸಲಾಯಿತು.
ವಸಂತ ಪಂಚಮಿಯಂದು ವಿದ್ಯಾಧಿದೇವತೆಯಾದ ಸರಸ್ವತಿ ದೇವಿಯು ಭೂಮಿಯಲ್ಲಿ ಅವತರಿಸಿದ ಪರ್ವ ಕಾಲವಾಗಿದೆ. ಜ್ಞಾನವನ್ನು ಪಡೆಯುವ ವಿದ್ಯಾರ್ಥಿಗಳು ಭಕ್ತಿಯಿಂದ ಪೂಜಿಸಿದರೆ ಅಜ್ಞಾನ, ವಿಪರೀತ ಜ್ಞಾನ ನಾಶವಾಗಿ ಸುಜ್ಞಾನ ಪ್ರಾಪ್ತಿಯೊಂದಿಗೆ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ತಿಳಿಸಿದರು.
ಪೂಜೆಯನ್ನು ಸಂಸ್ಥೆಯ ವಿದ್ಯಾರ್ಥಿ ಶ್ರೀಅವಿಘ್ನ ನಡೆಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಜನೆ, ಕುಣಿತ ಭಜನೆ, ಸಂಕೀರ್ತನೆ ನಡೆಸಿದರು.
ಹಾಗೂ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಜನ್ಮದಿನ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಲಾವಣ್ಯ ಹೆಚ್ ವಿ, ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್ ಶಕುಂತಲಾ ಹಾಗೂ ಸಂಸ್ಥೆಯ ಗುರುವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

.
.
.
.
