
ಕಾರ್ಕಳ, ಜ. 28: ಕಾರ್ಕಳ ತಾಲೂಕಿನ ನೂರಾಳ್ ಬೆಟ್ಟು ಗ್ರಾಮದ ಗುಮ್ಮೆತ್ತು ಎಂಬಲ್ಲಿ ಪತಿಯೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೂರಾಳ್ ಬೆಟ್ಟವಿನ ಗೀತಾ ಹಲ್ಲೆಗೊಳಗಾದ ಮಹಿಳೆ. ಗೀತಾ ಮತ್ತು ಪತಿ ಸುನೀಲ್ ಕುಮಾರ್ ನಡುವೆ ಮಂಗಳವಾರ (ಜ.27) ಬೆಳಗ್ಗೆ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಸುನೀಲ್ ಕುಮಾರ್ ಪತ್ನಿಗೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗೀತಾ ಅವರಿಗೆ ಎದೆಯ ಮೂಳೆಗಳು ಮುರಿದು, ಹೊಟ್ಟೆಯ ಒಳಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಗೀತಾ ಅವರ ಸಹೋದರ ಅಶೋಕ ಪೂಜಾರಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
