
ಕಾರ್ಕಳ,ಜ29: ಹೆಬ್ರಿ ತಾಲೂಕಿನ ಮುನಿಯಾಲಿನ ಕಾಡುಹೊಳೆ ಗ್ರಾಮೀಣ ಪರಿಸರದಲ್ಲಿ ಪ್ರಕೃತಿಯ ಸೊಬಗಿನ ನಡುವೆ ಆಧುನಿಕ ಸವಲತ್ತುಗಳು ಇರುವ ಸುಧಣ್ಣಾಸ್ ರಿವರ್ ವ್ಯೂ ಗಾರ್ಡನ್ ಹೆಬ್ರಿ- ಕಾರ್ಕಳ ಮುಖ್ಯರಸ್ತೆಯ ಮುನಿಯಾಲಿನ ಕಾಡುಹೊಳೆಯಲ್ಲಿ ನಾಳೆ (ಜನವರಿ 30) ಸಂಜೆ 6.5ಕ್ಕೆ ಶುಭಾರಂಭಗೊಳ್ಳಲಿದೆ.
ಅಜೆಕಾರಿನಲ್ಲಿ ಕೆಮ್ಮಂಜ ಸೂಪರ್ ಮಾರ್ಕೆಟ್ ಸೇರಿದಂತೆ ಹಲವಾರು ಸೇವೆಗಳನ್ನು ಜನರಿಗೆ ಪರಿಚಯಿಸಿದ ಸುಜಯ ಶೆಟ್ಟಿ ಹಾಗೂ ಗುರುಪ್ರಸಾದ್ ಶೆಟ್ಟಿ ಅವರು ಜಂಟಿಯಾಗಿ ಕಾಡುಹೊಳೆಯಲ್ಲಿ ಸುಧಣ್ಣ ರಿವರ್ ವ್ಯೂ ಗಾರ್ಡನ್ ಓಪನ್ ಹಾಲ್ ಪರಿಚಯಿಸುತ್ತಿದ್ದು ಇದು ಗ್ರಾಮೀಣ ಭಾಗದ ಜನರಿಗೂ ಉಪಯುಕ್ತವಾಗಲಿದೆ. ಕಾರ್ಕಳ- ಹೆಬ್ರಿ ಮುಖ್ಯರಸ್ತೆಯಲ್ಲಿ ಪ್ರಕೃತಿಯ ಸುಂದರ ತಾಣ ಕಾಡುಹೊಳೆಯ ನದಿ ತಟದಲ್ಲಿ ರಿವರ್ ವ್ಯೂ ಗಾರ್ಡನ್ ಆರಂಭಗೊಳ್ಳಲಿದ್ದು, ಸುಮಾರು 1,500 ಕುಳಿತುಕೊಳ್ಳುವ ಆಸನ ವ್ಯವಸ್ಥೆಯನ್ನು ಹೊಂದಿದೆ. ಅಷ್ಟೇ ಅಲ್ಲದೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಸುಸಜ್ಜಿತ ಕಿಚನ್, ಡೈನಿಂಗ್ ಹಾಲ್ ಜೊತೆಗೆ ಆಕರ್ಷಕ ವೇದಿಕೆಯನ್ನು ಒಳಗೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರವರ್ತಕರು ವಸತಿ ಸೌಲಭ್ಯವನ್ನು ಕಲ್ಪಿಸುವ ಆಶಯವನ್ನೂ ಹೊಂದಿದ್ದಾರೆ.
ಮುಂಬೈ ಉದ್ಯಮಿ ಶಿವರಾಮ ಜಿ. ಶೆಟ್ಟಿ ದೇವಸ್ಯ ಅಜೆಕಾರು ಅವರು ಗಾರ್ಡನ್ ಉದ್ಘಾಟಿಸಲಿದ್ದು, ಅಜೆಕಾರು ಇಗರ್ಜಿಯ ಧರ್ಮಗುರುಗಳಾದ ರೆ. ಫಾ। ಹೆನ್ರಿ ಮಸ್ಕರೇನ್ಹಸ್ ಆಶೀರ್ವಚನ ನೀಡಲಿದ್ದಾರೆ.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ವಿ. ಸುನಿಲ್ ಕುಮಾರ್, ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲ ಅಧ್ಯಕ್ಷ ವಿಜಯಭಾನು ಶೆಟ್ಟಿ , ಉದ್ಯಮಿ ದಿನೇಶ್ ಪೈ ಮುನಿಯಾಲು, ಉದಯ ಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮುಂಬೈ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಹರೀಶ್ ಶೆಟ್ಟಿ ಬೈರಂಪಳ್ಳಿ , ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿಯಾನಂದ ಹೆಗ್ಡೆ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್, ಕಟಪಾಡಿ ಪ್ರಜ್ವಲ್ ಕನ್‌ಸ್ಟ್ರಕ್ಷನ್‌ನ ದಯಾನಂದ ಶೆಟ್ಟಿ ಮಂಗಳೂರು, ಇಂಡಸ್ಟ್ರಿಯಲ್ ಸೊಲ್ಯೂಷನ್‌ನ ಯತ್ನೀಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಅಡುಗೆ ತಜ್ಞ ಬಿಲ್ಲಾಡಿ ಕುಂದಾಪುರದ ಶೀನ ಕುಲಾಲ್ ಅವರನ್ನು ಗೌರವಿಸಲಾಗುವುದು.
ಗಾರ್ಡನ್ ಶುಭಾರಂಭದ ಪ್ರಯುಕ್ತ ಸಭಾ ಕಾರ್ಯಕ್ರಮದ ಬಳಿಕ ಪ್ರಶಸ್ತಿ ಪುರಸ್ಕೃತ ಕಲಾವಿದರಿಂದ ನೃತ್ಯ ವೈವಿಧ್ಯ ನಡೆಯಲಿದ್ದು, ರಂಗತರಂಗ ಕಲಾವಿದರಿಂದ ಸಾಮಾಜಿಕ ಹಾಸ್ಯಮಯ ನಾಟಕ “ಶೋಬಾಜಿ” ಪ್ರದರ್ಶನಗೊಳ್ಳಲಿದೆ. ಗ್ರಾಮೀಣ ಪ್ರದೇಶದ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡಿರುವ ಈ ಗಾರ್ಡನ್ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರವರ್ತಕರಾದ ಸುಜಯ್ ಶೆಟ್ಟಿ ಹಾಗೂ ಗುರುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.


.
.
.
.
