
ಕಾರ್ಕಳ,ಜ.30: ಕಾರ್ಕಳ ತಾಲೂಕು ಸಾಣೂರು ಸೇತುವೆ ಬಳಿ ಸ್ಕೂಟರ್ ಗೆ ಬೈಕ್ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಗಾಯೊಂಡಿದ್ದಾರೆ.
ಬೆಳ್ತಂಗಡಿ ಲಾಯಿಲದ ಪ್ರಸನ್ನ ಅವರು ಸ್ಕೂಟರ್ ನಲ್ಲಿ ಶ್ವೇತಾ ಅವರೊಂದಿಗೆ ನಿನ್ನೆ ರಾತ್ರಿ ಅತ್ತೂರು ಜಾತ್ರೆಯಿಂದ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮ ಸ್ಕೂಟರ್ ಸವಾರರಿಬ್ಬರು ಗಾಯಗೊಂಡಿದ್ದು, ಸಹಸವಾರೆ ಶ್ವೇತಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
