
ಹೆಬ್ರಿ,ಜ. 30: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮನಶ್ಶಾಸ್ತ್ರಜ್ಞ ಡಾ. ಗಿರೀಶ್ ಮಾತನಾಡಿ, ನಿರಂತರ ಅಧ್ಯಯನದಿಂದ ಉತ್ತಮ ಅಂಕ ಗಳಿಸಲು ಸಾಧ್ಯ, ಆದರೆ ಓದಿದ್ದು ಮನಸ್ಸಿಗೆ ಅರ್ಥವಾಗಬೇಕಾದರೆ ಅದಕ್ಕೆ ಬೇಕಾದ ಪರಿಸರ ನಿರ್ಮಾಣ ಪೋಷಕರಿಂದ ದೊರೆಯಬೇಕು. ಅಲ್ಲದೆ ಸಕಾರಾತ್ಮಕವಾಗಿ ಚಿಂತಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಉತ್ತಮ ಆಹಾರವು ಕೂಡ ಪ್ರಮುಖವಾದದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಉಪಮುಖ್ಯಶಿಕ್ಷಕ ಮಹೇಶ್ ಹೈಕಾಡಿ ಸ್ವಾಗತಿಸಿ, ವೇದವ್ಯಾಸ ತಂತ್ರಿ ಮಡಾಮಕ್ಕಿ ವಂದಿಸಿದರು.


.
.
.
.
