Share this news

 

ಹೆಬ್ರಿ,ಜ.30: ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಸೂರಿಮಣ್ಣು ಇದರ ವತಿಯಿಂದ ಫೆಬ್ರವರಿ ೦೬ರ ತನಕ ನಡೆಯುವ ಭಜನಾ ಸುವರ್ಣ ಸಂಭ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

 ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಮುಂಬೈ ದೀಪ ಬೆಳಗಿ ಚಾಲನೆ ನೀಡಿ ಶುಭ ಹಾರೈಸಿದರು. ವೇದಮೂರ್ತಿ ನಾರಾವಿ ಗುರುರಾಜ್‌ ಭಟ್‌ ಮತ್ತು ವೇದಮೂರ್ತಿ ನಕ್ರೆ ರವಿ ಆಚಾರ್ಯ ನೇತ್ರತ್ವದಲ್ಲಿ ಋಕ್‌ ಸಂಹಿತಾಯಾಗ ಆರಂಭಗೊಂಡಿತು. ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ವೇದಮೂರ್ತಿ ಸೂರಿಮಣ್ಣು ರವಿರಾಜ್‌ ಉಪಾಧ್ಯಾಯ ಮೊದಲ ಭಜನೆ ಹಾಡಿ ೮ ದಿನಗಳ ಕಾಲ ನಡೆಯುವ ಭಜನಾ ಸಂಭ್ರಮಕ್ಕೆ ಶುಭಚಾಲನೆ ನೀಡಿದರು.

ಸೂರಿಮಣ್ಣು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಹಾಗೂ ವಿವಿಧ ಭಜನ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು. ಭಜನಾ ಸುವರ್ಣ ಸಂಭ್ರಮ ಸಮಿತಿ, ವಿವಿಧ ಉಪಸಮಿತಿಯ ಸದಸ್ಯರು, ಸ್ವಯಂ ಸೇವಕರು, ಸ್ಥಳೀಯ ಭಕ್ತ ಸಮೂಹ, ಭಜನಾ ಮಂಡಳಿಯ ಸದಸ್ಯರು, ವೈಧ್ಯಾಧಿಕಾರಿ ಡಾ. ರಶ್ಮಿ ಪ್ರಸಾದ್‌ ಕೋಟ, ಭಜನಾ ಸುವರ್ಣ ಸಂಭ್ರಮದ ರೂವಾರಿ ಗೌರವಾಧ್ಯಕ್ಷ ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಸೂರಿಮಣ್ಣು ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ ಶ್ರೀಧರ ಶೆಟ್ಟಿ ಪಡ್ಜಾಲ್‌, ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿ, ಜೊತೆ ಕಾರ್ಯದರ್ಶಿ ಸುಭಾಶ್ಚಂದ್ರ ನಾಯ್ಕ್‌, ಕೊಶಾಧಿಕಾರಿ ಪ್ರಸನ್ನ ಶೆಟ್ಟಿ ಒಂಬತೊಕ್ಲು, ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಯುವ ಘಟಕದ ಅಧ್ಯಕ್ಷ ಚೇತನ್‌ ಕುಲಾಲ್‌, ಗೌರವ ಸಲಹೆಗಾರ ಸುಧಾಕರ ಶೆಟ್ಟಿ ಮುನಿಯಾಲು, ಗಣೇಶ ನಾಯಕ್‌ ಕಾಡುಹೊಳೆ, ರಮೇಶ ಕುಮಾರ್‌ ಶಿವಪುರ, ಪ್ರಮುಖರಾದ ಶ್ರೀನಿವಾಸ ಹೆಬ್ಬಾರ್‌ ಶಿವಪುರ, ದಿನೇಶ ಶೆಟ್ಟಿ ಸೂರಿಮಣ್ಣು, ಪ್ರಸನ್ನ ಶೆಟ್ಟಿ ಪಡುಕುಡೂರು, ಅವಿನಾಶ ಶೆಟ್ಟಿ, ಪಡುಕುಡೂರು ಅಶೋಕ ಎಂ ಶೆಟ್ಟಿ, ವರಂಗ ರಾಮಚಂದ್ರ ಭಟ್‌, ನಂದಳಿಕೆ ವಿಠ್ಠಲ ಆಚಾರ್ಯ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *