Share this news

ಕಾರ್ಕಳ,ಫೆ. 02 :ದೇವರ ನಾಮಸ್ಮರಣೆ ಪ್ರತಿನಿತ್ಯವೂ ಮಾಡುವುದು., ಹರಿನಾಮ ಸಂಕೀರ್ತನೆಯಲ್ಲಿ ತೊಡಗಿಸಿಕೊಳ್ಳುವುದು., ಭಾಗವತ, ಪುರಾಣ ಕಥೆಗಳನ್ನು ಓದುವುದು. ಗೋವಿನ ಪೂಜೆಯಲ್ಲಿ ನಿರತರಾಗುವುದು. ಗಾಯತ್ರಿ ಮಂತ್ರದ ಅನುಷ್ಠಾನ. ಇವೆಲ್ಲವೂ ಭಗವಂತನ ಅನುಗ್ರಹವನ್ನು ಪಡೆಯಲು ಅತಿ ಅವಶ್ಯಕವಾದ ನಿತ್ಯ ಧಾರ್ಮಿಕ ಕಾರ್ಯಗಳು. ಭಗವಂತನ ನಾಮಸ್ಮರಣೆಯಿಂದ ಸಕಲ ಪಾಪಗಳು ನಾಶವಾಗುತ್ತದೆ.ಭೌತಿಕ ವಸ್ತುಗಳಿಂದ ಕ್ಷಣಿಕ ತೃಪ್ತಿಯನ್ನು ಪಡೆಯಬಹುದು. ಆದರೆ ಆಧ್ಯಾತ್ಮದಲ್ಲಿ ಸಿಗುವ ನೆಮ್ಮದಿ ಅನಂತವಾದುದು. ಕ್ಷಮಾಗುಣದ ಸಾಕಾರಮೂರ್ತಿಯಾದ ದೇವರ ಚಿಂತನೆಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಅಜೆಕಾರು ವಿಷ್ಣುಮೂರ್ತಿ ಬ್ರಾಹ್ಮಣ ಸಂಘವು 25 ವರ್ಷಗಳಿಂದ ನಡೆಸುತ್ತಾ ಬಂದಿರುವ ದೇವತಾ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಉಡುಪಿ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ತಿಳಿಸಿದರು.
ಅವರು ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶಾರದಮ್ಮ ಮತ್ತು ಶ್ರೀಧರ್ ಭಟ್ ವೇದಿಕೆಯಲ್ಲಿ ಶ್ರೀ ವಿಷ್ಣುಮೂರ್ತಿ ಬ್ರಾಹ್ಮಣ ಸಂಫದ ವತಿಯಿಂದ ನಡೆದ ಸಂಘದ ರಜತಸಂಭ್ರಮ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾ ಆರ್. ಭಟ್ ವರಂಗ, ಹೈನುಗಾರಿಕೆಯಲ್ಲಿ ವಿಶೇಷ ಸಾಧನೆಗೈದ ಸೌಮ್ಯ ಬಾಲಕೃಷ್ಣ ಭಟ್, ಹಿರಿಯರಾದ ವೆಂಕಟರಮಣ ಉಪಾಧ್ಯಾಯ ಮತ್ತು ಶಶಿನೀ ಉಪಾಧ್ಯಾಯ ದಂಪತಿಗಳನ್ನು ಸನ್ಮಾನಿಸಲಾಯಿತು. ಬ್ರಾಹ್ಮಣ ಸಂಫದ ಏಳಿಗೆಯಲ್ಲಿ ಶ್ರಮಿಸಿದ ಎಲ್ಲಾ ಪೂರ್ವಾಧ್ಯಕ್ಷರುಗಳನ್ನು, ಕಾರ್ಯದರ್ಶಿಗಳನ್ನು, ಪ್ರಸ್ತುತ ಅಧ್ಯಕ್ಷರನ್ನು ಹಾಗೂ ಕಾರ್ಯದರ್ಶಿಗಳನ್ನು ಹಾಗೂ ರಜತ ಮಹೋತ್ಸವದ ಯಶಸ್ಸಿಗೆ ಸಹಕರಿಸಿದವರನ್ನು ಸ್ವಾಮೀಜಿಯವರು ಗೌರವಿಸಿದರು.ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ರಂಗನಾಥ ಭಟ್ ಶುಭ ಹಾರೈಸಿದರು.

ವಿಷ್ಣುಮೂರ್ತಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಾಗರಾಜ ಪುತ್ರಾಯ ಅಧ್ಯಕ್ಷತೆಯನ್ನು ವಹಿಸಿ ಸಂಘದ ಎಲ್ಲ ಚಟುವಟಿಕೆಗಳು ಮತ್ತು ರಜತ ಸಂಭ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ವಿದ್ವಾನ್ ಬಾಲಕೃಷ್ಣ ಭಟ್ ಮತ್ತು ವಿದ್ವಾನ್ ಮಾಧವ ಭಟ್ ವೇದಘೋಷ ಮೂಲಕ ಪ್ರಾರ್ಥಿಸಿದರು. ಬ್ರಾಹ್ಮಣ ಸಂಘದ ಮಾಜಿ ಕಾರ್ಯದರ್ಶಿಗಳಾದ ಶ್ರೀಪತಿ ಬೆಳಿರಾಯ ಸ್ವಾಗತಿಸಿದರು. ಬ್ರಾಹ್ಮಣ ಸಂಫದ ಸ್ಥಾಪಕ ಅಧ್ಯಕ್ಷರಾದ ರಾಘವೇಂದ್ರ ಭಟ್ ಗುಡ್ಡೆಯಂಗಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ವರದಿ ಮಂಡಿಸಿದರು.ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ಪವನ್ ಕುಮಾರ್ ವಂದಿಸಿದರು.

ವರಂಗ ರಾಮಚಂದ್ರ ಭಟ್, ಚಂದ್ರಶೇಖರ ಅಡಿಗ, ಬಾಲಕೃಷ್ಣ ಭಟ್, ಸುಧೀರ್ ಪುತ್ರಾಯ, ವಿಮಲಾ ನಾಗರಾಜ ಭಟ್, ಶ್ವೇತಾ ಶ್ರೀನಿವಾಸ ಭಟ್, ವಿಶಾಲಿ ತಂತ್ರಿ ಸಹಿತ ಸರ್ವ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಷ್ಣು ಸಹಸ್ರನಾಮ ಹೋಮ, ಶ್ರೀ ಕೃಷ್ಣ ಅಷ್ಟೋತ್ತರ ಮತ್ತು ಶ್ರೀ ವೆಂಕಟೇಶ ಅಷ್ಟೋತ್ತರ, ದ್ವಾದಶ ಸ್ತೋತ್ರ ಪಾರಾಯಣ, ಲಕ್ಷ್ಮೀ ಶೋಭಾನೆ, ಶ್ರೀ ರಾಮ ತಾರಕ ಸಂಕೀರ್ತನೆ, ತುಳಸೀ ಸಂಕೀರ್ತನೆ, ಸ್ಥಳೀಯ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಅಜೆಕಾರು ಶ್ರೀ ವಿಷ್ಣುಮೂರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *