
ಪಡುಬಿದ್ರಿ,ಮಾ.16: ತಾನು ಕೊಟ್ಟಿದ್ದ ಸಾಲವನ್ನು ಹಿಂತಿರುಗಿಸುವAತೆ ಕೇಳಿದ ವ್ಯಕ್ತಿಗೆ ಚೂರಿಯಿಂದ ತಿವಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಕಾಪು ತಾಲೂಕಿನ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಮಾ.13ರಂದು ತಡರಾತ್ರಿ ನಡೆದಿದೆ.
ಬಜಗೋಳಿಯ ಸುಮಿತ್ ಎಸ್ ಸುವರ್ಣ ಹಾಗೂ ಧೀರಜ್ ಎಂಬವರು ಸ್ನೇಹಿತರಾಗಿದ್ದು, ಕಳೆದ 2 ವರ್ಷಗಳ ಹಿಂದೆ ಸುಮಿತ್ ಧೀರಜ್ ಅವರಿಂದ 2 ಲಕ್ಷ ರೂ. ಸಾಲ ಪಡೆದಿದ್ದು, 6 ತಿಂಗಳಿನಲ್ಲಿ ಹಿಂಪಡೆಯುವುದಾಗಿ ತಿಳಿಸಿದ್ದರು. ಆದರೆ ಈವರೆಗೂ ಹಣ ಕೊಡದ ಹಿನ್ನಲೆ ಮಾ.13 ರಂದು ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಸ್ಟೇಡಿಯಂ ಬಳಿ ಸುಮಿತ್ ಅವರು ಧೀರಜ್ ಬಳಿ ಹಣವನ್ನು ಕೇಳಿದಾಗ ಕೋಪಗೊಂಡ ಅವರು ಸುಮಿತ್ ಗೆ ಹಲ್ಲೆ ನಡೆಸಿದ್ದಾರೆ. ಬಳಿಕ ಮನೆಯಲ್ಲಿ ಹಣ ನೀಡುವುದಾಗಿ ಬೈಕಿನಲ್ಲಿ ಸುಮಿತ್ ಅವರನ್ನು ಕರೆದೊಯ್ದು ಬಬ್ಬುಸ್ವಾಮಿ ದೇವಸ್ಥಾನದ ಬಳಿ ಅವರನ್ನು ಬೈಕಿನಿಂದ ಇಳಿಸಿ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಸುಮಿತ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.














.
.
.
.
.
.
.
.
.
.
