
ಕಾರ್ಕಳ,ಮಾ.17: ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿಯವರು ಶಿರ್ಲಾಲು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಬಂದಾಗ ಸರಕಾರದಿಂದ ಅನುದಾನ ತರುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ ಉದಯ ಶೆಟ್ಟಿಯವರ ಗ್ರಾಮ ವಾಸ್ತವ್ಯ ಕೇವಲ ರಾಜಕೀಯ ನಾಟಕ ಅಷ್ಟೇ ಎಂದು ಅಜೆಕಾರು ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶೀತಲ್ ಜೈನ್ ಶಿರ್ಲಾಲು ಆರೋಪಿಸಿದ್ದಾರೆ.
ಉದಯ ಶೆಟ್ಟಿಯವರೇ ನೀವು ಕೇವಲ ರಾಜಕೀಯ ನಾಟಕ ಮಾಡಿ ಭಾಷಣ ಮಾಡಿದ್ದು ಬಿಟ್ಟರೆ ನೀವು ಕಳೆದ ಮೂರು ವರ್ಷದಿಂದ ಶಿರ್ಲಾಲು ಗ್ರಾಮಕ್ಕೆ ಎಷ್ಟು ಅನುದಾನ ತಂದು ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಶಾಸಕರು ಅನುದಾನ ತಂದರೆ ನಾನೇ ತಂದದ್ದು ಹೇಳುವ ನೀವು, ತಾಲೂಕಿನ ಅಭಿವೃದ್ಧಿಗೆ ಅಡ್ಡಿ ಪಡಿಸಿರುವುದು ಬಿಟ್ಟರೆ, ನಿಮ್ಮದೇ ಸರಕಾದಿಂದ ಅನುದಾನ ತಂದಿಲ್ಲ. ಬದಲಾಗಿ ಶಾಸಕರು ತಂದ ಅನುದಾನವನ್ನು ನಾನೇ ಮಾಡಿಸಿದ್ದು ಎಂದು ಹೇಳಿಕೊಂಡಿದ್ದೇ ನಿಮ್ಮ ಸಾಧನೆ.
ಶಿರ್ಲಾಲು ಪಿಯು ಕಾಲೇಜಿನ ಕೊಡುಗೆ ಜೊತೆಗೆ ರಸ್ತೆ, ಕಿಂಡಿ ಅಣೆಕಟ್ಟು ಸೇರಿದಂತೆ ಶಿರ್ಲಾಲು ಗ್ರಾಮಕ್ಕೆ ಶಾಸಕ ಸುನೀಲ್ ಕುಮಾರ್ ರವರ ಕೊಡುಗೆ ಏನು ಎನ್ನುವುದು ಗ್ರಾಮಸ್ಥರಿಗೆ ತಿಳಿದಿರುವ ವಿಚಾರ . ಆದ್ದರಿಂದ ಉದಯ ಶೆಟ್ಟಿಯವರು ಇನ್ನಾದರೂ ರಾಜಕೀಯ ಮಾಡುವುದನ್ನು ಬಿಟ್ಟು ಗ್ರಾಮದ ಅಭಿವೃದ್ಧಿಗೆ ಸಹಕರಿಸಿ ಎಂದು ಶೀತಲ್ ಜೈನ್ ಶಿರ್ಲಾಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.














.
.
.
.
.
.
.
.
.
.
