
ಕಾರ್ಕಳ, ಮಾ.23: ಕಾರ್ಕಳ ಹಿರಿಯಂಗಡಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಶೇಖರಣೆ ಮಾಡಿದ್ದ ಕಟ್ಟಿಗೆಗಳು ಸುಟ್ಟು ಕರಕಲಾಗಿವೆ. ಒಳಗಡೆ ನಿಲ್ಲಿಸಿದ್ದ ಆಂಬ್ಯುಲೆನ್ಸ್ ಬೆಂಕಿಯ ಕೆನ್ನಾಲಿಗೆಗೆ ಭಾಗಶಃ ಹಾನಿಯಾಗಿದೆ.
ಭಾನುವಾರ ಮಧ್ಯಾಹ್ನದ ವೇಳೆ ಈ ಅಗ್ನಿ ಅವಘಡ ಸಂಭವಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್, ಸಹ ಠಾಣಾಧಿಕಾರಿ ಚಂದ್ರಶೇಖರ ದೇವಾಡಿಗ,ರೂಪೇಶ್, ಅಲ್ವಿನ್,ದಿನೇಶ್ ಹಾಗೂ ಭೀಮಪ್ಪ ಭಾಗವಹಿಸಿದ್ದರು.















.
.
.
.
.
.
.
.
.
.
