Share this news

ಕಾರ್ಕಳ,ಮಾ. 25: ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಮತ್ತು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಈ ವರ್ಷದ ಘೋಷ ವಾಕ್ಯವಾದ “ಹೌದು, ಭಾರತದ ನೇತೃತ್ವದಲ್ಲಿ ನಾವು ಕ್ಷಯ ರೋಗವನ್ನು ನಿರ್ಮೂಲನೆ ಮಾಡಬಹುದು” ಎನ್ನುವುದರೊಂದಿಗೆ ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊಟೇರಿಯನ್ ಡಾll ಭರತೇಶ್ ಆದಿರಾಜ್, ಕ್ಷಯ ರೋಗದಲ್ಲಿ ಆರೋಗ್ಯ ಸಂಸ್ಥೆಯ ಪಾತ್ರಗಳ ಬಗ್ಗೆ ತಿಳಿಸಿದರು. ಜೊತೆಗೆ ತೊಡಕಿನ ಗರ್ಭಧಾರಣೆಯಲ್ಲಿ ತಾಯಂದಿರು ವಹಿಸಬೇಕಾದ ಮುಂಜಾಗ್ರತೆ ಬಗ್ಗೆ ತಿಳಿಸಿದರು.
ಸಭಾಧ್ಯಕ್ಷ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರಾದ ಸುರೇಂದ್ರ ನಾಯಕ್, ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಘಟಕದೊಂದಿಗೆ ಸಹಕಾರ ನೀಡುವ ಬಗ್ಗೆ ತಿಳಿಸಿದರು. ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ವೆರೋನಿಕಾ sr PHCO, ಸುಶೀಲಾ .ಕೆ BHEO ಇವರು ಸಮುದಾಯ ಸಹಭಾಗಿತ್ವದ ಮಹತ್ವ ಮತ್ತು HPV ಲಸಿಕೆಯ ಬಗ್ಗೆ ಮನವರಿಕೆ ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾ ಎಸ್ ಕಿದಿಯೂರು, ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ,ಸಂಜೆ ವೇಳೆ ಜ್ವರ, ತೂಕದಲ್ಲಿ ಗಣನೀಯ ಕಡಿಮೆಯಾಗುವುದು, ಹಸಿವು ಇಲ್ಲದಿರುವುದು, ಕಫದಲ್ಲಿ ರಕ್ತ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಈ ಲಕ್ಷಣಗಳುಳ್ಳ ಯಾವುದೇ ವ್ಯಕ್ತಿಯ ಮಾಹಿತಿ ಇದ್ದರೆ ಕಡ್ಡಾಯವಾಗಿ ಕಫ ಪರೀಕ್ಷೆ ಮಾಡಿಸಲು ಮನವೊಲಿಸಬೇಕಾಗಿ ಕರೆ ನೀಡಿದರು. ಸಮಾಜದಲ್ಲಿ ಇದರ ಬಗ್ಗೆ ಭಯ ಬೇಡ, ಚಿಕಿತ್ಸೆಯು ಸಂಪೂರ್ಣ ಪಡೆಯುವುದು ಮುಖ್ಯ. ಪೌಷ್ಟಿಕ ಆಹಾರ ಸೇವನೆ, ರೋಗಿಯ ವೈಯಕ್ತಿಕ ಕೆಟ್ಟ ಅಭ್ಯಾಸಗಳು ಸಹ ಪ್ರಭಾವ ಬೀರುವುದು. ನಮ್ಮ ಗ್ರಾಮವು ಕ್ಷಯ ಮುಕ್ತ ಗ್ರಾಮವಾಗಲು ತಮ್ಮೆಲ್ಲರ ಸಹಕಾರ ಬೇಕೆಂದು ತಿಳಿಸಿದರು.

ಮಾರ್ಚ್ 24 ರಿಂದ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನದಡಿಯಲ್ಲಿ ಬಲವಾದ ಮೇಲ್ವಿಚಾರಣೆ, ಶೀಘ್ರ ಪತ್ತೆ ಹಚ್ಚುವಿಕೆ ಹಾಗೂ ಸಮುದಾಯದ ಭಾಗವಹಿಸುವಿಕೆ ಯೊಂದಿಗೆ 2030 ರೊಳಗೆ ಕ್ಷಯ ಮುಕ್ತ ಭಾರತ ಗುರಿ ಸಾಧಿಸಿ ಕ್ಷಯ ರೋಗ ನಿರ್ಮೂಲನೆ ಮಾಡಲು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಪಂಚಾಯತ್ ಸದಸ್ಯರಾದ ರೀನಾ ಕ್ಯಾಥರಿನ್ ಫರ್ನಾಂಡಿಸ್, ಉದಯ ಕುಮಾರ್ ಶೆಟ್ಟಿ ಹಾಗೂ ಊರಿನ ಮುಖಂಡರಾದ ಶೋಭಾ ಭಾಸ್ಕರ್, ಹಂಝ, ಮುರುಗೇಶ್ ಉಪಸ್ಥಿತರಿದ್ದರು .
ಸುನೀತಾ ಪೂಜಾರಿ ಪ್ರಾರ್ಥಿಸಿ ಕುಮಾರಿ ಸ್ವರ್ಣ ಧನ್ಯವಾದವಿತ್ತರು.ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕುಮುದಾವತಿ ಕಾರ್ಯಕ್ರಮ ನಿರೂಪಿಸಿದರು.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *