
ಕಾರ್ಕಳ,ಜೂ. 16: ಕಡ್ತಲ ಗ್ರಾಮ ಪಂಚಾಯತ್ ಬೋರ್ಡ್, ವರಂಗ ಮಂಡಲ ಪಂಚಾಯತ್, ಕಡ್ತಲ ಗ್ರಾಮ ಪಂಚಾಯತ್ ಸದಸ್ಯರಾಗಿ, ಕಡ್ತಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ, ಕಡ್ತಲ ವೆಂಕಪ್ಪ ನಾಯ್ಕ್ (86ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಯೋಗ ಸಾಧಕ ಶೇಖರ್ ಕಡ್ತಲ ಸಹಿತ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳುನ್ನು ಅಗಲಿದ್ದಾರೆ.
ಮೃತರ ಅಂತಿಮ ವಿಧಿ ವಿಧಾನದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಶೇಖರ್ ಮಡಿವಾಳ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವ ದೇವಾಡಿಗ, ಜಗದೀಶ್ ಹೆಗ್ಡೆ, ಸುಕೇಶ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ಕರಾವಳಿ ಪ್ರಾಧಿಕಾರದ ಮಾಜಿ ಸದಸ್ಯ ಸಂಜೀವ ಪೂಜಾರಿ,ಮಾಜಿ ಪಂಚಾಯತ್ ಸದಸ್ಯರಾದ, ಸುನಿಲ್ ಹೆಗ್ಡೆ,ರಾಘವ ನಾಯ್ಕ್, ಕರುಣಾಕರ ಹೆಗ್ಡೆ,ಉಮೇಶ್ ಹೆಗ್ಡೆ, ಅಶೋಕ್ ನಾಯ್ಕ್, ದೀಕ್ಷಿತ್ ಶೆಟ್ಟಿ, ಸಮಾಜ ಸೇವಕರಾದ ಕರುಣಾಕರ ಹೆಗ್ಡೆ,ಸಂಪತ್ ಕುಮಾರ್ ಜೈನ್,ಮರಾಠಿ ಸಂಘದ ಅಧ್ಯಕ್ಷರಾದ ಶೇಖರ್ ನಾಯ್ಕ್ ಮುನಿಯಾಲ್, ಮಂಗಳೂರು ಸಂಘದ ಅಧ್ಯಕ್ಷರಾದ ಗುಣಪಾಲ್ ಹಾಗೂ ಆಪ್ತ ಬಂಧುಗಳು ಭಾಗವಹಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.



.
.
.
.
.
.
.
.
.
.
.
.
.
.
.
.
.
.
.
.
