

ಕಾರ್ಕಳ,ಆ. 27: ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಮುಂಜಾನೆ ಕಾರ್ಕಳ ತಾಲೂಕು ಕಚೇರಿಗೆ ಧಿಡೀರ್ ಭೇಟಿ ನೀಡಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದರು.
ಮಂಗಳೂರು ಲೋಕಾಯುಕ್ತ DySP ಸುರೇಶ್ ಕುಮಾರ್ ನೇತೃತ್ವದಲ್ಲ 7 ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ವಿಲೇವಾರಿಯಾಗದೇ ಬಾಕಿ ಉಳಿದಿರುವ ಹಳೆಯ ಕಡತಗಳನ್ನು ಪರಿಶೀಲನೆ ನಡೆಸುತ್ತಿದೆ. ಯಾವ ಕಾರಣಕ್ಕಾಗಿ ಕಡತಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ, ಕಡತಗಳು ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದೆಯೇ ಅಥವಾ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕಡತಗಳನ್ನು ಬಾಕಿ ಇರಿಸಿದ್ದಾರೆಯೇ ಎನ್ನುವ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಪರಿಶೀಲನೆ ಕಾರ್ಯ ಮುಗಿದ ಬಳಿಕ ಸಮಗ್ರವಾದ ವರದಿಯನ್ನು ಎಸ್ಪಿ ಕಚೇರಿ ಸಂಜೆ ಪ್ರಕಟಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
