

ಕಾರ್ಕಳ,ಆ.31: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತ್ವರಿತ ನೆರವು ನೀಡುವ ಉದ್ದೇಶದಿಂದ ಸರ್ಕಾರ ಮಹಿಳಾ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಿದೆ. ಸಾಂತ್ವನ ಕೇಂದ್ರದಲ್ಲಿ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಪ್ತಸಮಾಲೋಚನೆ ನಡೆಸಲಾಗುತ್ತದೆ.ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉಚಿತ ಕಾನೂನು ನೆರವು ಮತ್ತು ಪೋಲೀಸ್ ಠಾಣೆಗಳಲ್ಲಿ ದೂರು ನೀಡಲು ಸಹಾಯ ಮಾಡುತ್ತದೆ.ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ಹಾಗೂ ತಾತ್ಕಾಲಿಕ ಆಶ್ರಯವನ್ನು ಒದಗಿಸಲಾಗುತ್ತದೆ. ಆದರೆ ಕಾರ್ಕಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಲಿತ ಸಮುದಾಯದ ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ ಎಂದು ದಲಿತ ಮುಖಂಡ ಸುಧಾಕರ್ ದಾನಶಾಲೆ ಆರೋಪಿಸಿದ್ದಾರೆ.
ನೊಂದ ಮಹಿಳೆಯರ ಧ್ವನಿಯಾಗಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸಬೇಕಾಗಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕಾದ ಸಾಂತ್ವನ ಕೇಂದ್ರಗಳಿಗೆ ಸಂಜೆ 6 ಗಂಟೆ ಬಳಿಕ ಬಾಗಿಲು ಹಾಕಲಾಗುತ್ತಿದೆ.ಇದಲ್ಲದೇ ಕೌಟುಂಬಿಕ ಸಮಾಲೋಚನೆಯಲ್ಲಿ ಒಕ್ಕೂಟದ ಅಧ್ಯಕ್ಷರು ಹಸ್ತಕ್ಷೇಪ ನಡೆಸುತ್ತಿದ್ದು,ಅದ್ದರಿಂದ ಕಾರ್ಕಳ ಸಾಂತ್ವನ ಕೇಂದ್ರವನ್ನು ಬೇರೆ ಯಾವುದಾದರೂ ಉತ್ತಮವಾಗಿ ಕಾರ್ಯನಿರ್ವಹಿಸುವ ಎನ್‌ಜಿಓ ಗೆ ಜವಾಬ್ದಾರಿ ಕೊಡಬೇಕೆಂದು ಸುಧಾಕರ ದಾನಶಾಲೆ ಆಗ್ರಹಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
