

ಮಣಿಪಾಲ,ಸೆ.01: ಉದರ ಶಸ್ತ್ರಚಿಕಿತ್ಸೆಯಲ್ಲಿನ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾಗಿರುವ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಕೀಹೋಲ್ ಶಸ್ತ್ರಚಿಕಿತ್ಸೆ ಮತ್ತು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ರೊಬೊಟ್‌ನ ಸಂಯೋಜನೆಯನ್ನು ಬಳಸಿ 58 ವರ್ಷದ ಮಹಿಳೆಯೊಬ್ಬರಿಂದ ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ತೆಗೆದುಹಾಕಿ, ಕೇವಲ ಏಳು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರೆ.
ಮಹಿಳಾ ರೋಗಿಯು ಕಣ್ಣು ಮತ್ತು ಚರ್ಮ ಹಳದಿಯಾದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದು ಗಡ್ಡೆಯು ಯಕೃತ್ತಿನಿಂದ ಪಿತ್ತರಸದ ಹರಿವನ್ನು ತಡೆದಾಗ ಉಂಟಾಗುವ ಪ್ರತಿರೋಧಕ ಕಾಮಾಲೆಯ ಲಕ್ಷಣ. ಸ್ಕ್ಯಾನ್‌ಗಳಲ್ಲಿ, ಪಿತ್ತರಸ ಮತ್ತು ಮೇದೋಜೀರಕ ನಾಳಗಳು ಸಣ್ಣ ಕರುಳಿಗೆ ತೆರೆದುಕೊಳ್ಳುವ ಸ್ಥಳದಲ್ಲಿ ಬೆಳೆಯುವ ಕ್ಯಾನ್ಸರ್ ಆದ ಪೆರಿಆಂಪುಲರಿ ಗಡ್ಡೆ ಕಂಡುಬAದಿತು. ಇದು ಕರುಳಿನ ಗೋಡೆ ಮತ್ತು ಮೇದೋಜೀರಕ ಗ್ರಂಥಿಯ ತಲೆಗೆ ಹರಡಿತ್ತು.ರೋಗಿಯ ಶರೀರರಚನೆಯಲ್ಲಿನ ಅಸ್ವಾಭಾವಿಕ ವೈಶಿಷ್ಟ್ಯವು ಈ ಪ್ರಕರಣವನ್ನು ಇನ್ನಷ್ಟು ಕಷ್ಟಕರವಾಗಿಸಿತು. ಯಕೃತ್ತಿಗೆ ರಕ್ತ ಪೂರೈಸುವ ಅಪಧಮನಿಗಳಲ್ಲಿ ಒಂದು, ಗಡ್ಡೆಯ ಸಮೀಪದಲ್ಲೇ, ಶಸ್ತ್ರಚಿಕಿತ್ಸೆಯ ಸ್ಥಳದ ಮೂಲಕವೇ ಅಸಹಜ ಮಾರ್ಗದಲ್ಲಿ ಹಾದುಹೋಗುತ್ತಿತ್ತು. ಕೆಲವೇ ಜನರಲ್ಲಿ ಕಂಡುಬರುವ ಈ ವ್ಯತ್ಯಾಸವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವ ಮತ್ತು ಗಾಯದ ಅಪಾಯವಿತ್ತು,
ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು, ತಂಡವು ‘ವಿಪಲ್ಸ್ ಶಸ್ತ್ರಚಿಕಿತ್ಸೆ’ ಎಂದೇ ಹೆಚ್ಚು ಪರಿಚಿತವಾಗಿರುವ ಪ್ಯಾಂಕ್ರಿಯಾಟಿಕೊಡ್ಯುಡೆನೆಕ್ಟಮಿಯನ್ನು ನಡೆಸಿತು. ಇದು ಶಸ್ತ್ರಚಿಕಿತ್ಸಕರೊಬ್ಬರು ಕೈಗೊಳ್ಳಬಹುದಾದ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಗಳಲ್ಲಿ ಒಂದೆAದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. ಇದರಲ್ಲಿ ಮೇದೋಜೀರಕ ಗ್ರಂಥಿಯ ತಲೆ, ಸಣ್ಣ ಕರುಳಿನ ಒಂದು ಭಾಗ, ಪಿತ್ತರಸ ನಾಳ ಮತ್ತು ಪಿತ್ತಕೋಶವನ್ನು ತೆಗೆದುಹಾಕಿ, ನಂತರ ಆಹಾರ ಮತ್ತು ಜೀರ್ಣರಸಗಳು ಮತ್ತೆ ಸಾಮಾನ್ಯವಾಗಿ ಹರಿಯುವಂತೆ ಜೀರ್ಣಾಂಗವನ್ನು ಜಾಗರೂಕತೆಯಿಂದ ಮತ್ತೆ ಜೋಡಿಸಲಾಗುತ್ತದೆ.ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ಸಣ್ಣ ಕೀಹೋಲ್ ಛೇದಗಳ ಮೂಲಕ ತೆಗೆದುಹಾಕಲಾಯಿತು.
ವಿಶೇಷವಾಗಿ ಅಸ್ವಾಭಾವಿಕ ಯಕೃತ್ತಿನಿನ ರಕ್ತನಾಳವು ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ, ತಪ್ಪಿಗೆ ಬಹಳ ಕಡಿಮೆ ಅವಕಾಶವಿರುತ್ತದೆ,” ಎಂದು ಸರ್ಜಿಕಲ್ ಆಂಕಾಲಜಿ ವಿಭಾಗದ ಡಾ. ನವೀನಾ ಎ. ಎನ್. ಕುಮಾರ್ ಹೇಳಿದರು. “ಕೀಹೋಲ್ ಮೂಲಕ ಗಡ್ಡೆ ತೆಗೆಯುವುದನ್ನು ರೊಬೊಟಿಕ್ ಪುನರ್ರಚನೆಯೊಂದಿಗೆ ಸಂಯೋಜಿಸುವ ಮೂಲಕ, ನಾವು ಇಡೀ ಶಸ್ತ್ರಚಿಕಿತ್ಸೆಯನ್ನು ಸುರಕ್ಷಿತವಾಗಿ ಹಾಗೂ ಹೆಚ್ಚಿನ ನಿಖರತೆಯಿಂದ ಪೂರ್ಣಗೊಳಿಸಲು ಸಾಧ್ಯವಾಯಿತು.ರೋಗಿಗಳನ್ನು ದೂರದ ನಗರಗಳಿಗೆ ಕಳುಹಿಸುವ ಬದಲಿಗೆ, ಇಂತಹ ಅತ್ಯಾಧುನಿಕ, ಕನಿಷ್ಠ ಆಕ್ರಮಣಕಾರಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಮನೆಯ ಸಮೀಪದಲ್ಲೇ ಒದಗಿಸಲು ಸಾಧ್ಯವಾಗಿರುವುದು ಈ ಪ್ರದೇಶದ ಜನರಿಗೆ ಒಂದು ಮಹತ್ವದ ಹೆಜ್ಜೆಯಾಗಿದೆ. ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ನವಾಜ್ ಉಸ್ಮಾನ್, ಡಾ. ಪ್ರೀತಿ ಎಸ್. ಶೆಟ್ಟಿ, ಡಾ. ಅಖಿಲ್ ಪಾಲೋಡ್ ಹಾಗೂ ಡಾ. ಅನಂತಕೃಷ್ಣನ್ ಬಾಲಕೃಷ್ಣನ್ ಸೇರಿದಂತೆ ಅರಿವಳಿಕೆ ತಜ್ಞರು ಉಪಸ್ಥಿತರಿದ್ದರು. ಶಸ್ತ್ರಚಿಕಿತ್ಸೆಯ ಯಶಸ್ವಿ ನಿರ್ವಹಣೆಗೆ ಓಟಿ ಸಿಬ್ಬಂದಿಯೂ ಅಗತ್ಯ ಸಹಕಾರ ನೀಡಿದರು ಎಂದರು.
ಈ ಯಶಸ್ವಿ ಶಸ್ತ್ರಚಿಕಿತ್ಸೆಯು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಶಸ್ತ್ರಚಿಕಿತ್ಸೆಗೆ ಹೆಸರುವಾಸಿಯಾಗಿದೆ ಎಂದು ಸಾಬೀತಾಗಿದೆ. ದೇಶದ ದೊಡ್ಡ ಮಹಾನಗರಗಳಿಂದ ಬಹಳ ದೂರದಲ್ಲಿದ್ದರೂ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಬೋಧನಾ ಆಸ್ಪತ್ರೆಯು ಅತ್ಯಾಧುನಿಕ ರೊಬೊಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳು ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳಿಂದ ಹಿಡಿದು ವಿಶೇಷ, ಬಹುಶಿಸ್ತೀಯ ಕ್ಯಾನ್ಸರ್ ತಂಡಗಳವರೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಕ್ರಮೇಣ ಬೆಳೆಸಿಕೊಂಡಿದೆ. ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಕರಾವಳಿ ಕರ್ನಾಟಕ ಮತ್ತು ಸುತ್ತಮುತ್ತಲ ಪ್ರದೇಶದ ರೋಗಿಗಳು ದೂರದ ನಗರಗಳಿಗೆ ಅಥವಾ ವಿದೇಶಗಳಿಗೆ ಹೋಗದೇ ತಮ್ಮ ಮನೆಬಾಗಿಲಲ್ಲೇ ಅತ್ಯಾಧುನಿಕ ಕ್ಯಾನ್ಸರ್ ಆರೈಕೆಯನ್ನು ಪಡೆಯಬಹುದಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
