Share this news

ಬೆಂಗಳೂರು,ನ.4; ಉತ್ತಮ ಶಿಕ್ಷಣ ಪಡೆದು, ಸ್ವಂತ ದುಡಿಮೆಯಿಂದ ಜೀವನ ನಿರ್ವಹಣೆ ಮಾಡಲು ಸಾಮರ್ಥ್ಯವಿರುವ ಹಾಗೂ ಸ್ವಾವಲಂಬಿಯಾಗಿರುವ ಹೆಂಡತಿಗೆ ಗಂಡನಿAದ ಜೀವನಾಂಶ ಪಡೆಯುವ ಅರ್ಹತೆಯಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರಲ್ಲಿ ಪತ್ನಿಗೆ ಮಾಸಿಕ 20,000 ರೂ. ಜೀವನಾಂಶ ನೀಡುವಂತೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಮಹಿಳೆಯು ಸುಶಿಕ್ಷಿತೆಯಾಗಿ ಸ್ವಾವಲಂಬಿ ಜೀವನ ನಡೆಸಲು ಶಕ್ತಳಾಗಿದ್ದಾಗ ಆಕೆಯನ್ನು ಪತಿಯ ಮೇಲೆ ಅವಲಂಬಿತಳೆAದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದೆ.

ಪತಿಯ ಆದಾಯವು ಪತ್ನಿಗಿಂತ ಎಷ್ಟೇ ಹೆಚ್ಚಿದ್ದರೂ, ಪತ್ನಿಯು ಉತ್ತಮ ಶಿಕ್ಷಣ ಪಡೆದು, ತನ್ನ ಜೀವನವನ್ನು ತಾನೇ ನೋಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರೆ, ಆಕೆಯನ್ನು ಗಂಡನ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಂತ ಗಳಿಕೆ ಇರುವುದು ಜೀವನಾಂಶದ ಅರ್ಜಿಯನ್ನು ವಜಾಗೊಳಿಸಲು ಸೂಕ್ತ ಆಧಾರವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಪತಿಯು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿದ್ದು ವರ್ಷಕ್ಕೆ 40 ಲಕ್ಷ ರೂ. ಗಳಿಸುತ್ತಾನೆ ಎಂದು ಪತ್ನಿ ವಾದಿಸಿದ್ದರು. ಪತ್ನಿಯೂ ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದು ವರ್ಷಕ್ಕೆ 10 ಲಕ್ಷ ರೂ. ಗಳಿಸುತ್ತಿದ್ದರು. ವಿಚಾರಣೆ ವೇಳೆ, “ನನ್ನ ಸ್ವಂತ ಗಳಿಕೆಯಿಂದ ತಿಂಗಳಿಗೆ 35,000 ರೂ. ವ್ಯಯಿಸಿ ಪೋಷಕರನ್ನು ನಾನೇ ಸಾಕುತ್ತಿದ್ದೇನೆ” ಎಂದು ಪತ್ನಿ ಹೇಳಿಕೊಟ್ಟಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿದ ಹೈಕೋರ್ಟ್, “ತನ್ನ ಆದಾಯದಲ್ಲಿ ಪೋಷಕರನ್ನೇ ಪೋಷಿಸುವ ಸಾಮರ್ಥ್ಯವಿರುವ ಮಹಿಳೆ, ತನಗೆ ಬದುಕಲು ಗಂಡನ ನೆರವು ಬೇಕು ಎನ್ನುವುದು ಒಪ್ಪಲು ಸಾಧ್ಯವಿಲ್ಲ,” ಎಂದು ಹೇಳಿದೆ.

ಕೌಟುಂಬಿಕ ನ್ಯಾಯಾಲಯವೊಂದು ಪತ್ನಿಗೆ ಮಾಸಿಕ 20,000 ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಪತಿಯ ಪರ ವಕೀಲರು, “ಪತ್ನಿಯು ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಇ ಇಂಜಿನಿಯರಿAಗ್ ಪದವಿ ಮುಗಿಸಿದ್ದು, ಖಾಸಗಿ ಕಂಪನಿಯೊAದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ವಾರ್ಷಿಕ ವೇತನ 10 ಲಕ್ಷ ರೂ. ಆಗಿದ್ದು, ಪ್ರತಿ ತಿಂಗಳು ಸುಮಾರು 54,700 ರೂ. ಗಳಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಗೌರವಯುತ ಜೀವನ ನಡೆಸಲು ಈ ಆದಾಯ ಸಾಕು ಎಂದು ವಾದಿಸಿದ್ದರು.

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *