Share this news

ನವದೆಹಲಿ,ನ.4: ವಶಕ್ಕೆ ಪಡೆದ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಇರುವ 24 ಗಂಟೆಗಳ ಗಡುವನ್ನು, ಔಪಚಾರಿಕ ಬಂಧನದ ಸಮಯದಿಂದಲ್ಲ, ಬದಲಾಗಿ ವ್ಯಕ್ತಿಯನ್ನು ವಶಕ್ಕೆ ಪಡೆದ ಸಮಯದಿಂದಲೇ ಲೆಕ್ಕ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ (ನ.5 )ತೀರ್ಪು ನೀಡಿದೆ.
ಸಾಮಾನ್ಯವಾಗಿ ಪೊಲೀಸರು ವಿಚಾರಣೆಗಾಗಿ ಒಬ್ಬ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋಗಬಹುದು ಅಥವಾ ಶೋಧ ಕಾರ್ಯಾಚರಣೆಯ ವೇಳೆ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದು. ಆದರೆ ಆ ವ್ಯಕ್ತಿಗೆ ಅಲ್ಲಿಂದ ಸ್ವತಂತ್ರವಾಗಿ ಹೊರಹೋಗಲು ಅವಕಾಶವಿಲ್ಲದಿದ್ದರೆ, ಆತನ ಸ್ವಾತಂತ್ರ‍್ಯವನ್ನು ನಿರ್ಬಂಧಿಸಿದAತಾಗುತ್ತದೆ. ಇಂತಹ ಸಂದರ್ಭದಲ್ಲಿ ಅಧಿಕೃತವಾಗಿ ಬಂಧನದ ದಾಖಲೆ ಸಿದ್ಧಪಡಿಸಿಲ್ಲ ಎಂಬ ಕಾರಣಕ್ಕೆ 24 ಗಂಟೆಗಳ ಗಡುವನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬಂಧನ ಮತ್ತು ಕಸ್ಟಡಿ ನಡುವೆ ಕೃತಕ ವ್ಯತ್ಯಾಸ ಸೃಷ್ಟಿಸಿ ಕಾನೂನಿನ ನಿಯಮಗಳನ್ನು ತಪ್ಪಿಸುವಂತಿಲ್ಲ ಎಂದಿದೆ.

ತ್ರಿಪುರಾದಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ, 2025ರ ಸೆಪ್ಟೆಂಬರ್ 29ರ ಮಧ್ಯಾಹ್ನ 2 ಗಂಟೆಗೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಮರುದಿನ ಬೆಳಗ್ಗೆ 11 ಗಂಟೆಗೆ ಮಾತ್ರ ಅಧಿಕೃತ ಬಂಧನ ದಾಖಲಿಸಿ, ಸುಮಾರು 18 ಗಂಟೆಗಳ ಕಾಲ ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆ ಇಲ್ಲದೆ ವಶದಲ್ಲಿಟ್ಟಿದ್ದರು. ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆ ಲೆಕ್ಕ ಹಾಕಬೇಕು ಎಂದು ತಿಳಿಸಿದ ನ್ಯಾಯಾಲಯ, ಸಂವಿಧಾನದ 22(2)ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಿ ಆ ನಾಲ್ವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತು.

ಈ ತೀರ್ಪಿನಿಂದ ಪೊಲೀಸರ ವಿಚಾರಣೆ ಮತ್ತು ಬಂಧನ ಪ್ರಕ್ರಿಯೆಯಲ್ಲಿ ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಹೆಚ್ಚಿನ ರಕ್ಷಣೆ ಸಿಕ್ಕಂತಾಗಿದೆ. ಅಧಿಕೃತ ಬಂಧನದ ದಾಖಲೆ ತಡವಾಗಿ ಸಿದ್ಧಪಡಿಸುವ ಮೂಲಕ ವ್ಯಕ್ತಿಯನ್ನು ದೀರ್ಘಕಾಲ ಪೊಲೀಸ್ ವಶದಲ್ಲಿಡುವುದಕ್ಕೆ ಅವಕಾಶವಿಲ್ಲ. ವಿಶೇಷವಾಗಿ, ವಿಚಾರಣೆ ಅಥವಾ ಶೋಧ ಕಾರ್ಯಾಚರಣೆಯ ಹೆಸರಿನಲ್ಲಿ ವ್ಯಕ್ತಿಯ ಸ್ವಾತಂತ್ರ‍್ಯವನ್ನು ನಿರ್ಬಂಧಿಸಿದರೂ ಸಂವಿಧಾನದ ರಕ್ಷಣೆ ಅನ್ವಯಿಸುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *