Share this news

ಕಾರ್ಕಳ:ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕಾರ್ಕಳದ ನ್ಯಾಯವಾದಿ ವಿಫುಲ್‌ತೇಜ್ ಅವರ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡ ಅಂದಿನ ಕಾರ್ಕಳ ನಗರ ಠಾಣಾ ಪೊಲೀಸ್ ಸಬ್‌ಇನ್ಸೆ÷್ಪಕ್ಟರ್ ಆಗಿದ್ದ ನಂಜಾ ನಾಯ್ಕ್ಗೆ ಕಾರ್ಕಳ ನ್ಯಾಯಾಲವು ಮಾನನಷ್ಟ ಪ್ರಕರಣದಲ್ಲಿ 50 ಸಾವಿರ ದಂಡ ವಿಧಿಸಿದೆ.

ಏನಿದು ಪ್ರಕರಣ
ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾರ್ಕಳದ ವಕೀಲರಾದ ಎಂ.ಕೆ ವಿಫುಲ್‌ತೇಜ್ ಅವರು ತಮ್ಮ ಕಾರಿನ ಹಿಂಭಾಗದ ಗ್ಲಾಸಿಗೆ ಚೌಕಿದಾರ್ ಶೇರ್ ಹೈ ಎಂಬ ಬರಹದ ಸ್ಟಿಕರ್ ಅಂಟಿಸಿದ್ದರು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ದೂರಿನ ಮೇರೆಗೆ ಚುನಾವಣಾ ನೋಡಲ್ ಅಧಿಕಾರಿಯಾಗಿದ್ದ ಅಂದಿನ ಕಾರ್ಕಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೇಜರ್ ಹರ್ಷ.ಕೆ,ಬಿ ಹಾಗೂ ನಗರ ಠಾಣೆಯ ಎಸ್.ಐ ಆಗಿದ್ದ ನಂಜಾ ನಾಯ್ಕ್ ವಿಫುಲ್ ತೇಜ್ ಅವರ ಕಚೇರಿಗೆ ಹೋಗಿ ಕಾರಿಗೆ ಅಂಟಿಸಿದ್ದ ಚೌಕಿದಾರ್ ಶೇರ್ ಹೈ ಎಂಬ ಸ್ಟಿಕ್ಕರ್ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಅದನ್ನು ತೆಗೆಯುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದ ವಿಫುಲ್ ತೇಜ್ ಇದು ಯಾವುದೇ ಪಕ್ಷಕ್ಕೆ ಸಂಬAಧಪಟ್ಟ ಬರಹವಲ್ಲ ಹಾಗೂ ಯಾವುದೇ ಪಕ್ಷಕ್ಕೂ ಸಂಬAಧಿಸಿದ್ದಲ್ಲ ಆದ್ದರಿಂದ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ನೋಡಲ್ ಅಧಿಕಾರಿ ಹರ್ಷ.ಕೆ,ಬಿ ಅವರ ಆದೇಶದ ಮೇರೆಗೆ ಎಸ್.ಐ ನಂಜಾ ನಾಯ್ಕ್ ಅವರು ವಿಫುಲ್ ತೇಜ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಎಂದು ಜಾಮೀನುರಹಿತ ಪ್ರಕರಣ ದಾಖಲಿಸಿದ್ದರು.
ಚುನಾವಣೆ ಮುಗಿದ ಬಳಿಕ ಈ ಪ್ರಕರಣ ರದ್ದು ಕೋರಿ ವಿಫುಲ್‌ತೇಜ್ ಅವರು ಹೈಕೋರ್ಟಿನಲ್ಲಿ ಈ ಪ್ರಕರಣ ರದ್ದುಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಸರ್ಕಾರಿ ಅಧಿಕಾರ ಕರ್ತವ್ಯಕ್ಕೆ ಅಡ್ಡಿ ಎನ್ನುವುದೇ ಆಧಾರರಹಿತ ಆರೋಪ ಎಂದು ಪ್ರಕರಣವನ್ನು ರದ್ದುಪಡಿಸಿತ್ತು.
ಇತ್ತ ಚುನಾವಣೆ ಮುಗಿದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವೇ ರದ್ದಾದ ಬೆನ್ನಲ್ಲೇ ವಿಫುಲ್ ತೇಜ್ ಅವರು ಸುಳ್ಳು ದೂರು ದಾಖಲಿಸಿದ್ದ ಎಸ್.ಐ ನಂಜಾ ನಾಯ್ಕ್ ಹಾಗೂ ಇತರರ ವಿರುದ್ಧ ಕಾರ್ಕಳ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿz ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಲಯವು ನಂಜಾ ನಾಯ್ಕ್ ಹಾಗೂ ಸರ್ಕಾರವು ವಿಫುಲ್‌ತೇಜ್ ಅವರಿಗೆ 50 ಸಾವಿರ ಪಾವತಿಸಬೇಕೆಂದು ಆದೇಶ ಹೊರಡಿಸಿದೆ.
ಈ ಮೂಲಕ ನ್ಯಾಯವಾದಿ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಪ್ರಕರಣ ದಾಖಲಿಸಿದ್ದ ಪೊಲೀಸ್ ಅಧಿಕಾರಿ ನಂಜಾ ನಾಯ್ಕ್ಗೆ ಕೋರ್ಟ್ ಆದೇಶದಿಂದ ತೀವೃ ಮುಖಭಂಗವಾಗಿದೆ

 

 

 

Leave a Reply

Your email address will not be published. Required fields are marked *