ಕಾರ್ಕಳ: ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ತನ್ನ ರಾಜಕೀಯ ಜೀವನದಲ್ಲಿ ಮೌಲ್ಯಯುತ ರಾಜಕಾರಣ ಮಾಡಿಕೊಂಡು ಬಂದಿರುವ ಸರಳ ಸಜ್ಜನಿಕೆಯ ರಾಜಕಾರಣಿ.ಸದಾ ಬಡವರ ಪರವಾಗಿ ಹೋರಾಟ ನಡೆಸಿ ಬಡವರಿಗೆ ನ್ಯಾಯ ಒದಗಿಸಿಕೊಟ್ಟು ಉಳಿದ ರಾಜಕೀಯ ನಾಯಕರಿಗೆ ಮಾದರಿ ಎನಿಸಿಕೊಂಡಿದ್ದರು ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಹೇಳಿದರು.
ಅವರು ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಅವರ ಪುಣ್ಯಸ್ಮರಣೆ ಪ್ರಯುಕ್ತ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾದ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಗೋಪಾಲ ಭಂಡಾರಿಯವರು ತನ್ನ ರಾಜಕೀಯ ಜೀವನದಲ್ಲಿ ತನಗಾಗಿ ಏನೂ ಮಾಡದೇ ಸಮಾಜಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ವ್ಯಕ್ತಿ. ಇಂತಹ ವ್ಯಕ್ತಿಯ ಪುಣ್ಯಸ್ಮರಣೆ ದಿನ ರಕ್ತದಾನ ಶಿಬಿರ ನಡೆಸುವ ಮೂಲಕ ಮತ್ತೊಮ್ಮೆ ಅವರನ್ನು ನೆನೆದು ದುಃಖವಾಗುತ್ತದೆ ಆದ್ದರಿಂದ ಅವರ ಹುಟ್ಟು ಹಬ್ಬದ ದಿನ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಶೇಖರ ಮಡಿವಾಳ, ಡಿ.ಆರ್ ರಾಜು, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ,ಕೊಳ್ಕೆಬೈಲು ಕಿಶನ್ ಹೆಗ್ಡೆ, ಮಂಜುನಾಥ ಪೂಜಾರಿ, ಅಶ್ಪಕ್ ಅಹಮದ್, ಸುಬೀತ್ ಎನ್.ಆರ್, ಸಿರಿಯಣ್ಣ ಶೆಟ್ಟಿ,ಗೋಪಿನಾಥ್ ಭಟ್,ಅಜಿತ್ ಹೆಗ್ಡೆ ಮಾಳ,ಕಿರಣ್ ಹೆಗ್ಡೆ, ಸಂದೀಪ್ ಶೆಟ್ಟಿ, ಕಾಂತಿ ಶೆಟ್ಟಿ, ಶೋಭಾ, ಪ್ರತಿಮಾ ರಾಣೆ ಮುಂತಾದವರು ಉಪಸ್ಥಿತರಿದ್ದರು
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಕಾರ್ಯಕ್ರಮ ನಿರೂಪಿಸಿದರು.
ರಕ್ತದಾನ ಶಿಬಿರದಲ್ಲಿ ಸುಮಾರು 80 ಯುನಿಟ್ ರಕ್ತ ಸಂಗ್ರಹಣೆಯಾಗಿದ್ದು, ರಕ್ತದಾನಿಗಳಿಗೆ ಸಸಿ ವಿತರಿಸುವ ಮೂಲಕ ರಕ್ತದಾನದ ಜತೆಗೆ ಪರಿಸರ ಕಾಳಜಿಯನ್ನು ವಹಿಸಿರುವುದು ವಿಶೇಷವಾಗಿತ್ತು.
