ಕಾರ್ಕಳ:ಯುವತಿ ಮೇಲಿನ ಪೈಶಾಚಿಕ ಕೃತ್ಯ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ.ದೇಶ ವಿದೇಶಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಭೀಕರ ಅತ್ಯಾಚಾರ ಕೊಲೆಗಳು ನಡೆದಾಗ ನಾವು ಪ್ರತಿಭಟನೆ ಮಾಡಿದ್ದೇವೆ. ಆದರೆ ಇಂದು ನಮ್ಮ ಊರಿನಲ್ಲೇ ಇಂತಹ ಭೀಕರ ಹೇಯ ಕೃತ್ಯ ನಡೆಯುತ್ತಿದೆ ಎಂದರೆ ಸಮಸ್ತ ಹಿಂದೂ ಸಮಾಜ ಜಾಗೃತರಾಗಬೇಕಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳದ ಹಿಂದೂ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಹಿಂದೂಪರ ಸಂಘಟನೆಗಳು ನಡೆಸಿ ಪ್ರತಿಭಟನಾ ಸಭೆಯ ಭಾಗವಹಿಸಿ ಮಾತನಾಡಿ,ಡ್ರಗ್ಸ್ ದಂಧೆ,ಲವ್ ಜಿಹಾದಿ ಕುರಿತು ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಮೃದು ಧೋರಣೆಯ ಪರಿಣಾಮವಾಗಿ ಪಾತಕಿಗಳ ಅಟ್ಟಹಾಸ ಮಿತಿಮೀರಿದೆ, ಇಂತಹ ಕೃತ್ಯದ ವಿರುದ್ಧ ನಾಗರಿಕ ಸಮಾಜ ಹೋರಾಟ ನಡೆಸಬೇಕಿದೆ ಎಂದರು.
ಮುಸ್ಲಿಂ ಯುವಕರನ್ನು ಮದುವೆಯಾದ ಹಿಂದೂ ಯುವತಿಯರನ್ನು ಕೊಂದು ಫ್ರಿಡ್ಜ್ ನೊಳಗೆ ತುಂಬಿಸಲಾಯಿತು.ಇದರ ಕುರಿತು ಹಿಂದೂ ಸಮಾಜ ಜಾಗೃತವಾಗಬೇಕಿದೆ. ಹಿಂದುತ್ವವು ಎಂದಿಗೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಮುಸ್ಲಿಂ ಯುವಕರ ಅಮಾನುಷ ಕೃತ್ಯಗಳ ವಿರುದ್ಧ ಹಿಂದೂಗಳು ಸಿಡಿದೆದ್ದರೆ ದೇಶದಲ್ಲಿ ಫ್ರಿಡ್ಜ್ ಗಳು ಸಾಕಾಗದು ಎಂದರು.
ಷರಿಯತ್ ಕಾನೂನನ್ನು ಹಾಗೂ ಕುರಾನನ್ನು ಮುಸ್ಲಿಮರು ಪಾಲನೆ ಮಾಡುವುದಾದರೆ ಅತ್ಯಾಚಾರಿಯನ್ನು ಸಾರ್ವಜನಿಕವಾಗಿ ಶಿಕ್ಷಿಸಬೇಕು.
ದೂರದ ಪ್ಯಾಲೆಸ್ಟೈನ್ ಪರವಾಗಿ ಪ್ರತಿಭಟನೆ ಮಾಡುತ್ತಾರೆ,ಆದರೆ ಕಾರ್ಕಳದ ಯುವತಿಯ ಮೇಲೆ ದೌರ್ಜನ್ಯ ನಡೆದಾಗ ನೀವು ಯಾಕೆ ಮಾತನಾಡುತ್ತಿಲ್ಲ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು.ಖಾಕಿಯ ಕೈಕಟ್ಟುವ ಕೆಲಸ ಸರ್ಕಾರ ಮಾಡಬಾರದು. ಸಮಾಜಬಾಹಿರ ಕೃತ್ಯಗಳನ್ನು ಪೊಲೀಸರು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು.
ಡ್ರಗ್ಸ್ ವಿರುದ್ಧ , ಲವ್ ಜಿಹಾದ್ ವಿರುದ್ಧ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶಾಸಕ ಸುನಿಲ್ ಹೇಳಿದರು.
ಚಿತ್ರದುರ್ಗದ ಭೋವಿ ಮಠದ ಮಠಾಧೀಶರಾದ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮದಲ್ಲಿ ಹೆಣ್ಣಿಗೆ ವಿಶೇಷ ಗೌರವವಿದೆ.ಇಂತಹ ಪೂಜ್ಯನೀಯ ಸ್ತ್ರೀಕುಲಕ್ಕೆ ಅವಮಾನ ಮಾಡಿ ಅತ್ಯಾಚಾರ ಮಾಡುವವರನ್ನು ನಾಶಮಾಡಬೇಕಿದೆ. ಸಂಸ್ಕಾರದ ಕೊರತೆಯಿಂದ ಮನುಷ್ಯನಲ್ಲಿ ತಾಮಸ ಶಕ್ತಿ ಬೆಳೆಯುತ್ತದೆ. ರಾಜ್ಯದಲ್ಲಿ 350 ಕ್ಕೂ ಮಿಕ್ಕಿ ಅತ್ಯಾಚಾರದ ಪ್ರಕರಣಗಳು ನಡೆದಿದೆ. ಕೇವಲ ಯಾಂತ್ರಿಕ ಭಕ್ತಿ, ಗೌರವದಿಂದ ಇಂತಹ ಹೀನ ಕೃತ್ಯ ನಡೆಯುತ್ತಿವೆ. ಇಂತಹ ದುಷ್ಕೃತ್ಯಗಳಿಗೆ ಮಟ್ಟ ಹಾಕಬೇಕಿದ್ದರೆ ಅತ್ಯಂತ ಕಠೋರ ಕಾಯ್ದೆ ಜಾರಿಗೊಳಿಸಬೇಕಿದೆ ಎಂದರು.
ಸಂತ್ರಸ್ತ ಯುವತಿ ಇನ್ನೂ ಚೇತರಿಸಿಕೊಂಡಿಲ್ಲ ಎಂದಾದರೆ ಆಕೆಯ ಮೇಲೆ ಕಾಮಾಂಧರು ಯಾವ ರೀತಿಯಲ್ಲಿ ಅಟ್ಟಹಾಸ ಮೆರೆದಿದ್ದಾರೆ ಎನ್ನುವುದು ಸಾಬೀತಾಗಿದೆ ಎಂದು ಸ್ವಾಮೀಜಿಗಳು ಹೇಳಿದರು
ವಿ.ಹಿಂ.ಪ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್ ಮಾತನಾಡಿ,ಜಿಹಾದಿ ಮಾನಸಿಕತೆಯ ದುರುಳರು ಅಮಾಯಕ ಹಿಂದೂ ಯುವತಿ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿರುವ ವಿರುದ್ಧ ಸಮಸ್ತ ಹಿಂದೂ ಸಮಾಜ ಖಂಡಿಸಬೇಕಿದೆ. ಮಾದಕ ದ್ರವ್ಯ ಸಾಗಾಟ, ಲವ್ ಜಿಹಾದ್ ತಡೆಗಟ್ಟಲು ಕರಾವಳಿ ಭಾಗದಲ್ಲಿ ಪೊಲೀಸರ ವಿಶೇಷ ತಂಡ ರಚಿಸಬೇಕು ಆ ಮೂಲಕ ಬಡ ಹೆಣ್ಣು ಮಕ್ಕಳನ್ನು ರಕ್ಷಿಸುವ ಕೆಲಸವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಮಿತ್ರಪ್ರಭಾ ಹೆಗ್ಡೆ, ಹಿಂದೂ ಜಾಗರಣ ವೇದಿಕೆ ಶಂಕರ್ ಕೋಟ ಮುಂತಾದವರು ಉಪಸ್ಥಿತರಿದ್ದರು
ಭಜರಂಗದಳದ ತಾಲೂಕು ಸಂಯೋಜಕ ಮನಿಷ್ ಶೆಟ್ಟಿ ಸ್ವಾಗತಿಸಿದರು
`