
ಕಾರ್ಕಳ, ಮಾ.20: ಜಾತ್ರಾ ಮಹೋತ್ಸವದ ವೇಳೆ ದೇವಸ್ಥಾನ ಪ್ರವೇಶಿಸುತ್ತಿದ್ದ ವ್ಯಕ್ತಿಯನ್ನು ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಮಾ.17 ರಂದು ಮುಂಡ್ಕೂರಿನಲ್ಲಿ ನಡೆದಿದೆ.
ಮುಂಡ್ಕೂರಿನ ಸೋಮನಾಥ ಪೂಜಾರಿ ಎಂಬವರು ಪೊಸ್ರಾಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದಾಗ ದೇವಸ್ಥಾನದ ಒಳಗೆ ಹೋಗುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿದ ಪ್ರಸಾದ್ ಶೆಟ್ಟಿ ಎಂಬಾತ ಅವರನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮನಾಥ ಪೂಜಾರಿ ದೂರು ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















.
.
.
.
.
.
.
.
.
.
