Share this news

 

ಕಾರ್ಕಳ: ಬೈಲೂರು ಹೊಸಬೆಳಕು ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಸುಮಾರು 4 ವರ್ಷಗಳ ಹಿಂದೆ ಕುಂದಾಪುರ ಕಡೆ ಬುದ್ಧಿಮಾಂದ್ಯನಾಗಿ ತಿರುಗಾಡುತ್ತಿದ್ದ ಸುಮಾರು 36 ವರ್ಷ ಪ್ರಾಯದ ಉಮೇಶ ಎಂಬುದಾಗಿ ಹೇಳುತ್ತಿದ್ದ ವ್ಯಕ್ತಿಯೊಬ್ಬರು ಆಶ್ರಯ ಪಡೆದಿದ್ದರು. ಅವರಿಗೆ ಕಳೆದ ಒಂದು ತಿಂಗಳಿನಿಂದ ಆನಾರೋಗ್ಯ ಉಂಟಾಗಿದ್ದು, ಚಿಕಿತ್ಸೆ ನೀಡಲಾಗಿತ್ತು.
ಆದರೆ ಅವರು ಆ. 7 ರಂದು ಸಂಜೆ ಆಶ್ರಮದಲ್ಲಿರುವಾಗ ಅಸ್ವಸ್ಥಗೊಂಡಿದ್ದು, ವೈದ್ಯರನ್ನು ಆಶ್ರಮಕ್ಕೆ ಕರೆಸಿ ಪರೀಕ್ಷಿಸಿದಾಗ ಅವರು ಅದಾಗಲೇ ಮೃತಪಟ್ಟಿದ್ದರು.

ಉಮೇಶ್ ಅಸ್ತಮಾ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *