Share this news

 

ಬೆಳ್ತಂಗಡಿ : ಧರ್ಮಸ್ಥಳ ಪರಿಸರದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬAಧಪಟ್ಟAತೆ ಈ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಅನಾಮಧೇಯ ಸೂಚಿಸಿದ ಹೊಸ ಜಾಗದಲ್ಲಿ ಮರದ ಬುಡದಲ್ಲಿ ನೆಲದ ಮೇಲೆ ಪುರುಷನ ಇಡೀ ಅಸ್ಥಿಪಂಜರವೇ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಇದರಿಂದ ಧರ್ಮಸ್ಥಳದಲ್ಲಿ ಅಸ್ತಿಪಂಜರ ಶೋಧ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ.

ಅನಾಮಧೇಯ ದೂರುದಾರ 11ನೇ ಪಾಯಿಂಟ್ ಸ್ಥಳ ಬಿಟ್ಟು ಬೇರೆ ಜಾಗಕ್ಕೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದಾನೆ. 11ನೇ ಪಾಯಿಂಟ್’ನಿAದ 120 ಮೀಟರ್ ಮುಂದೆ ದೂರುದಾರ ಹೆಜ್ಜೆ ಹಾಕಿದ್ದಾನೆ, ಅಲ್ಲಿ ಪುರುಷನ ಪೂರ್ಣ ಅಸ್ತಿ ಪಂಜರ ಪತ್ತೆಯಾಗಿದೆ ಇದುವರೆಗೂ ಹದಿಮೂರು ಸ್ಥಳಗಳನ್ನು ಅನಾಮಿಕ ವ್ಯಕ್ತಿ ಗುರುತಿಸಿದ್ದಾನೆ. ದೂರುದಾರನ ವರಸೆ ನೋಡಿ ಎಸ್‌ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.ಹೊಸ ಸ್ಥಳದ ಬಗ್ಗೆ ಎಸ್‌ಐಟಿಗೆ ದೂರುದಾರ ಮೊದಲೇ ತಿಳಿಸಿಲ್ಲ. ಏಕಾಏಕಿ ಹೊಸ ಸ್ಥಳದತ್ತ ಹೆಜ್ಜೆ ಹಾಕಿದ್ದಾನೆ.ನೂತನ ಮಾಹಿತಿಯನ್ನು ಎಸ್‌ಐಟಿ ಗಮನಕ್ಕೆ ತರದೆ ಸ್ಥಳ ಗುರುತಿಸಿದ್ದಾನೆ. ಈ ಕುರಿತು ಸಹಾಯಕ ಕಮೀಷನರ್ ಕೂಡ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಎಸಿ ನಡೆ ಬಹಳ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೊಸ ಜಾಗದಲ್ಲಿ ಪರಿಶೀಲನೆ ವೇಳೆ ಮನುಷ್ಯನ ಪೂರ್ಣ ಅಸ್ತಿ ಪಂಜರ ಪತ್ತೆಯಾಗಿದೆ. ಮರದ ಬುಡದಲ್ಲಿ ಪುರುಷನ ಪೂರ್ಣ ಅಸ್ತಿಪಂಜರ ಪತ್ತೆಯಾಗಿದೆ ಅದು ಕೂಡ ಎಂಟರಿAದ ಒಂಬತ್ತು ತಿಂಗಳ ಅಸ್ತಿಪಂಜರ ಅನ್ನೋ ಮಾಹಿತಿ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ.

ಎಸ್‌ಐಟಿ ನಿಗದಿಪಡಿಸಿದ ಕಾರ್ಯಸೂಚಿಯಂತೆ ಕಾರ್ಯಾಚರಣೆ ನಡೆಯಬೇಕಿತ್ತು. ಆದರೆ ಇದೀಗ ಏಕಾಎಕಿ ಮತ್ತೊಂದು ಕಡೆ ಇಡೀ ಅಸ್ಥಿಪಂಜರ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *