ಕಾರ್ಕಳ, ಅ,10: ಬೆಳ್ಮಣ್ಣಿನ ಸೂರಜ್ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕನ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಇದೀಗ ಮೇಜರ್ ಅಪ್ಡೇಟ್ ಲಭ್ಯವಾಗಿದ್ದು, ಆತನ ಡೆತ್ ನೋಟ್ ನಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಆಕೆಯ ಮೂವರು ಗೆಳೆಯರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಯೋ ಮೆಡಿಕಲ್ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ ತನ್ನ ಸಾವಿಗೆ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ನಿರೀಕ್ಷಾ, ಗುರುಪುರ ಕೈಕಂಬ ನಿವಾಸಿ ನಂದಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್, ಕಂಕನಾಡಿ ನಿವಾಸಿ ರಾಹುಲ್ ಹಾಗೂ ಗುರುಪುರ ಕೈಕಂಬ ನಿವಾಸಿ ತಸ್ಲಿಂ ಎಂಬವರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ.
ಸಹೋದ್ಯೋಗಿ ನಿರೀಕ್ಷಾ ಪ್ರೀತಿಸುವ ನಾಟಕವಾಡಿ, ಮಂಗಳೂರಿನ ಬಿಕರ್ನಕಟ್ಟೆ ರೂಮಿಗೆ ತೇಜು ಕುಮಾರ್ ಮತ್ತು ಆತನ ಗೆಳತಿಯ ಜೊತೆ ಹೋಗಿದ್ದಾಗ ಆಕೆ ರಹಸ್ಯ ಕ್ಯಾಮರಾ ಮೂಲಕ ನನ್ನ ಜತೆಗಿದ್ದ ಅಶ್ಲೀಲ ಫೋಟೋ ತೆಗೆದು ಬಳಿಕ ಅದನ್ನು ಮುಂದಿಟ್ಟು ಬೆದರಿಸಿ ಲಕ್ಷಾಂತರ ರೂ ಹಣ ವಸೂಲಿ ಮಾಡಿದ್ದಾಳೆ. ಇದಲ್ಲದೇ ತನ್ನ ರೂಮ್ ಮೇಟ್ ತೇಜುಕುಮಾರ್ ಎಂಬಾತನಿಗೂ ಬೆದರಿಕೆ ಹಾಕಿದ್ದಾಳೆ ಎಂದೆಲ್ಲಾ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವುದು ಪತ್ತೆಯಾಗಿದೆ. ನನಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲದ ಕಾರಣ ಅವರಿಂದ ಇನ್ಯಾರಿಗೂ ತೊಂದರೆಯಾಗಬಾರದು. ನನ್ನ ಜೀವನರ್ಪಂತ ಇವರು ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಹಾಗಾಗಿ ಸಾಯಲು ನಿರ್ಧರಿಸುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.
ಮಾನಸಿಕ ಖಿನ್ನತೆಯಿಂದ ಆಭಿಷೇಕ್ ಆತ್ಮ,ಹತ್ಯೆ: ಬ್ಲಾಕ್ ಮೇಲ್ ಆರೋಪ ಸುಳ್ಳು: ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ
ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಹಾಗೂ ಡೆತ್ ನೋಟ್ ವಿಚಾರವಾಗಿ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಪ್ರತಿಕ್ರಿಯಿಸಿದ್ದು, ಅಭಿಷೇಕ್ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎನ್ನುವ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಿರೀಕ್ಷಾ ಅವರಿಗೆ ವಿವಾಹವಾಗಿದ್ದು, ಇದೇ ಕಾರಣದಿಂದ ಅಭಿಷೇಕ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಆತನ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಿರೀಕ್ಷಾ ಅವರ ಖಾಸಗಿ ವಿಡಿಯೋವನ್ನು ಆಸ್ಪತ್ರೆಯ ಸಿಬ್ಬಂದಿಗಳ ವಾಟ್ಸಾಪ್ ಗ್ರೂಪಿಗೆ ಶೇರ್ ಮಾಡಿದ್ದ. ಅಭಿಷೇಕ್ ಅವರು ಮಾಡಿರುವ ಬ್ಲಾಕ್ ಮೇಲ್ ಆರೋಪ ಆಧಾರರಹಿತವಾಗಿದ್ದು, ಆತ ಬರೆದಿಟ್ಟ ಡೆತ್ ನೋಟ್ ಹಿನ್ನಲೆಯಲ್ಲಿ ಮೂವರನ್ನು ವಿಚಾರಣೆ ನಡೆಸಿ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಇAದಿನ ಯುವಕರು ದೈಹಿಕ ಆಕರ್ಷಣೆ ಹಾಗೂ ಕ್ಷಣಿಕ ಸುಖಕ್ಕಾಗಿ ಬಲಿಯಾಗಿ ತಮ್ಮ ಭವಿಷ್ಯ ಹಾಗೂ ಕುಟುಂಬದ ನೆಮ್ಮದಿ ಕೆಡಿಸಿ ಅವರ ಬದುಕು ನರಕವನ್ನಾಗಿಸುವ ದುರಂತ ಘಟನೆಗಳು ಸಾಕಷ್ಟು ನಡೆಯುತ್ತಿದೆ. ಹದಿಹರೆಯದ ಯುವಕ ಯುವತಿಯರು ತಮ್ಮ ತಂದೆತಾಯಿ ಕುಟುಂಬದ ಹೊಣೆಗಾರಿಕೆ ಮರೆತು ಬದುಕು ಕಟ್ಟಿಕೊಳ್ಳಬೇಕಾದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎನ್ನುವ ಮಾಯಾಜಿಂಕೆಯ ಮೋಹಕ್ಕೆ ಬಲಿಯಾಗುತ್ತಿರುವುದು ಮಾತ್ರ ದುರಂತವೇ ಸರಿ.