ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆನ್ಲೈನ್ ವಂಚನೆಗಳು ನಡೆಯುತ್ತಿದ್ದರೂ ಜನ ಮಾತ್ರ ಇನ್ನೂ ಬುದ್ಧಿ ಕಲಿತ್ತಿಲ್ಲ. ಕಾರ್ಕಳದ ನವೀನ್ ಎಂಬ ಯುವಕ ಆನ್ಲೈನ್ ವಂಚನೆಯ ಜಾಲಕ್ಕೆ ಬಲಿಬಿದ್ದು ಬರೋಬ್ಬರಿ 12 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡಿರುವ ಪ್ರಕರಣ ನಡೆದಿದೆ.
ನವೀನ್ ಎಂಬವರಿಗೆ ಜೂ. 8ರಂದು ಬೆಳಿಗ್ಗೆ 11:18 ರ ಸುಮಾರಿಗೆ ಮೊಬೈಲ್ಗೆ ಫೇಸ್ ಬುಕ್ನಲ್ಲಿ AL JABER GROUP ADD ಬಂದಿದ್ದು, ಅದಕ್ಕೆ ಪಿರ್ಯಾದಿದಾರರು ವಾಟ್ಸ್ಪ್ ಮೂಲಕ Material controller link ಕ್ಲಿಕ್ ಮಾಡಿದಾಗ, ನಿಮಗೆ ಜೂ.9 ರಂದು ನಾಳೆ ಇಂಟರ್ವ್ಯೂ ಇದೆ ಎಂದು ವಾಟ್ಸಾಪ್ ಮೆಸೇಜ್ ಬಂದಿತ್ತು. ನವೀನ್ ಅವರು ಮೇಸೆಜನ್ನು ಓಪನ್ ಮಾಡಿ ಅದರಲ್ಲಿ ತಿಳಿಸಿದಂತೆ ತಮ್ಮ ಹೆಸರು ವಿಳಾಸ ಇತ್ಯಾದಿ ವಿವರಗಳನ್ನು ನಮೂದಿಸಿದ್ದರು. ಇದಾದ ಬಳಿಕ ವೀಸಾ ಹಾಗೂ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ ವಂಚಕರು ವಿವಿಧ ಖಾತೆಗಳಿಗೆ 08/06/2025 ರಿಂದ 25/06/2025ರ ತನಕ ಹಂತ ಹಂತವಾಗಿ ನವೀನ್ ಬ್ಯಾಂಕ್ ಖಾತೆಯಿಂದ ಒಟ್ಟು 12,43,426 ಮೊತ್ತವನ್ನು ಗೂಗಲ್ ಪೇ ಮತ್ತು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಇದಾದ ಬಳಿಕ ಕೆಲಸ ಕೊಡಿಸದೇ ಮೋಸ ಮಾಡಿದ್ದಾರೆ ಎಂದು ನವೀನ್ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.