
ಕಾರ್ಕಳ, ಫೆ.18: ಪ್ರೀತಿಯಲ್ಲಿ ಬಿದ್ದ ಯುವಕನೊಬ್ಬ ವಯಸ್ಸಲ್ಲದ ವಯಸ್ಸಿಗೆ ಮದುವೆಯಾಗಿ ಮನೆಯವರಿಂದ ದೂರವಾಗಿ ಇದೀಗ ಸಂಬಂಧಿಕರೇ ಆತನ ಮೇಲೆ ಹಲ್ಲೆ ನಡೆಸಿದ್ದು, ಯುವಕ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ಕಾರ್ಕಳದಲ್ಲಿ ನಡೆದಿದೆ.ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಸುಜಯ್(22ವ) ಹಲ್ಲೆಗೊಳಗಾದ ಯುವಕ.
ಸುಜಯ್ ಕಳೆದ 6 ತಿಂಗಳ ಹಿಂದೆ ಮಂಜುಳ ಎಂಬವರನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಬಳಿಕ ಮನೆಯಲ್ಲಿ ಕಿರಿಕಿರಿ ಆದ ಕಾರಣ 4 ದಿನಗಳ ಹಿಂದೆ ಕಾರ್ಕಳ ಕುಕ್ಕುಂದೂರು ಗ್ರಾಮದ ಜಾರ್ಕಳ ಎಂಬಲ್ಲಿ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆದರೆ ಫೆ.16 ರಂದು ಸುಜಯ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಬಜಗೋಳಿಯ ಲಕ್ಷ್ಮೀ ಹೋಟೆಲ್ ಬಳಿ ತಾಯಿಯ ತಂಗಿಯ ಮಗ ಶರತ್ ಎಂಬಾತ ಇನ್ನಿಬ್ಬರೊಂದಿಗೆ ಸೇರಿಕೊಂಡು ಸುಜನ್ ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಕಾಲಿನಿಂದ ತುಳಿದು, ದೊಣ್ಣೆಯಿಂದ ಹಲ್ಲೆ ನಡೆಸಿ, ಎಳೆದಾಡಿ, ಜೀವ ಬೆದರಿಕೆ ಹಾಕಿದ್ದಾರೆ. ಹಲ್ಲೆಯಿಂದ ಗಾಯಗೊಂಡಿ ಸುಜನ್ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
.
.
.
.
.
.
