Share this news

ಬೆಂಗಳೂರು: “ದುಷ್ಟ ಶಕ್ತಿ ಎದುರು ಸತ್ಯದ ಜಯ. ಸರ್ಕಾರವನ್ನ ಅಸ್ಥಿರಗೊಳಿಸಲು ವಾಮಮಾರ್ಗ, ಮೋಸದಿಂದ ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ನಿಗ್ರಹಿಸಲಿ” ಇದು ಇಂದು ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೇ ಪ್ರಕಟಗೊಂಡ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜಾಹೀರಾತು. ಈ ಮೂಲಕ ದಸರಾ ಶುಭಾಶಯ ಕೋರುವ ಜಾಹೀರಾತು ನೆಪದಲ್ಲೇ ವಿಪಕ್ಷಗಳಿಗೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ.

ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ, ಇದು ಸರ್ಕಾರದ ಅಸ್ಥಿರಗೊಳಿಸಲು ಬಿಜೆಪಿಯಿಂದ ಷಡ್ಯಂತ್ರ ಅಂತಾ ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ದಸರಾಗೆ ಶುಭಾಶಯ ಕೋರುವ ಸರ್ಕಾರದ ಜಾಹೀರಾತಿನ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟಿದೆ. ವಾಮಮಾರ್ಗದಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುವುದಿಲ್ಲ ಎಂದು ದೋಸ್ತಿ ನಾಯಕರಿಗೆ ಜಾಹೀರಾತು ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಂದು ತಿರುಗೇಟು ನೀಡಿದೆ.

ಇಷ್ಟೇ ಅಲ್ಲದೆ ಜಾಹೀರಾತಿನಲ್ಲಿ ನವರಾತ್ರಿಯ 9 ದಿನಗಳಂದು ಸಂಹರಿಸಬೇಕಾದ ಶಕ್ತಿಗಳ ಬಗ್ಗೆಯೂ ಉಲ್ಲೇಖವಿದೆ.

ಕಾಂಗ್ರೆಸ್ ಉಲ್ಲೇಖಿಸಿದ ವಿನಾಶಕಾರಿ ಶಕ್ತಿಗಳು ಯಾವುವು!?
ಪ್ರತಿಪದ: ಕೋಮುಗಲಭೆ-ಶಾಂತಿ ಸೌಹಾರ್ದತೆಯಿಂದ ನಿಗ್ರಹ.
ದ್ವಿತೀಯ: ಸಾಮಾಜಿಕ ಪಿಡುಗು-ವೈಜ್ಞಾನಿಕ ಅರಿವಿನಿಂದ ನಿವಾರಣೆ.
ತೃತೀಯ: ಶಾಂತಿಭAಗ-ಸಾಮರಸ್ಯ ಕದಡುವವರ ನಿರ್ಮೂಲನೆ.
ಚತುರ್ಥಿ: ದುಷ್ಕೃತ್ಯ-ಕಠಿಣ ಶಿಕ್ಷೆ.
ಪಂಚಮಿ: ವಿಧ್ವಂಸಕತೆ-ಧೈರ್ಯ & ಶೌರ್ಯದಿಂದ ದಮನ.
ಷಷ್ಠಿ: ಅಶಾಂತಿ-ಕಾನೂನು ಸುವ್ಯವಸ್ಥೆಯಿಂದ ನಿವಾರಣೆ.
ಸಪ್ತಮಿ: ಪ್ರಚೋದನೆ-ಪ್ರೇರೇಪಿಸುವವರ ನಿರ್ಮೂಲನೆ.
ಅಷ್ಟಮಿ: ಸುಳ್ಳು ವದಂತಿ-ಮೂಲದಿAದಲೇ ನಾಶ.
ನವಮಿ: ಅಪಪ್ರಚಾರ ಮಾಡುವವರ ಮೇಲೆ ಕ್ರಮ.
ಇವಿಷ್ಟು ವಿಚಾರಗಳನ್ನು ಕಾಂಗ್ರೆಸ್ ಪಕ್ಷ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಉಲ್ಲೇಖಿಸಿದೆ.

ಕಾಂಗ್ರೆಸ್ ಜಾಹೀರಾತಿನ ಬಗ್ಗೆ ಆಕ್ರೋಶ ಹೊರಹಾಕಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ರಾಜ್ಯವನ್ನು ಮೋಸದಿಂದ ಸ್ಥಿರಗೊಳಿಸಲು ಸರ್ಕಾರ ಹೊರಟಿದೆ. ಸ್ಥಿರಗೊಳಿಸುವುದು, ಅಸ್ಥಿರಗೊಳಿಸುವುದು ನಮ್ಮ ಕೈಯಲ್ಲಿ ಇಲ್ಲ, ಚಾಮುಂಡಿ ತಾಯಿ ಕೈಯಲ್ಲಿ ಇದೆ ಎಂದು ಕಿಡಿಕಾರಿದ್ದಾರೆ.
ದುಷ್ಟಶಕ್ತಿಗಳು ಯಾರು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *