Share this news

ಕಾರ್ಕಳ: ಗ್ರಾಮೀಣ ಪ್ರದೇಶಗಳಲ್ಲಿ ಬಡ ಹಾಗೂ ‌ಮಧ್ಯಮ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದು,ಗ್ರಾಮೀಣ ಭಾಗದ ಬಡರೋಗಿಗಳಿಗೆ ಸಕಾಲಕ್ಕೆ ಆರೋಗ್ಯ ಸೇವೆ ದೊರಕುವುದು ಕಷ್ಟ ಸಾಧ್ಯ.ಈ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಂದ ಬಡ ಹಾಗೂ ಮಧ್ಯಮ ವರ್ಗಗಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ ಎಂದು ಕೆ.ಎಂ.ಸಿ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಶರತ್ ರಾವ್ ಹೇಳಿದರು.

ಅವರು ಫೆ.25ರಂದು ಅಜೆಕಾರು ರಾಮಮಂದಿರಲ್ಲಿ ನಡೆದ ರಾಮಮಂದಿರ ಟ್ರಸ್ಟ್, ಅಜೆಕಾರು, ಸಾರ್ವಜನಿಕ ಶಾರದಮಹೋತ್ಸವ ಸಮಿತಿ,ಅಜೆಕಾರು , ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಾಹೆ ಮಣಿಪಾಲ, ಕಾರ್ಡಿಯಾಲಜಿ ಅಟ್ ಡೋರ್ಸ್ಟೆಪ್ ಫೌಂಡೇಶನ್ (ಕ್ಯಾಡ್) ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ  ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಣಿಪಾಲ ಆಸ್ಪತ್ರೆಗಳು ಆರೋಗ್ಯದ ಕಾಳಜಿಗೆ ಮಹತ್ವ ನೀಡುತ್ತಿವೆ,ಗ್ರಾಮೀಣ ಪ್ರದೇಶಗಳಲ್ಲಿ ಮಣಿಪಾಲ್ ಆಸ್ಪತ್ರೆ ಗಳ ಸೇವೆ ಅನನ್ಯವಾಗಿದೆ ಎಂದರು.

ಮಂಗಳೂರಿನ ಖ್ಯಾತ ಹೃದಯ ತಜ್ಞ ಡಾ|ಪದ್ಮನಾಭ ಕಾಮತ್ ಮಾತನಾಡಿ, ಅಜೆಕಾರು ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಗೊಂಡರೆ ರೋಗಿಗಳು ಸಕಾಲ ಚಿಕೆತ್ಸೆಗಳಿಗೆ ದೂರದ ನಗರಗಳಿಗೆ ಅಲೆಯಬೇಕಾಗಿಲ್ಲ ಎಂದರು.ಶಿಬಿರಗಳಲ್ಲಿ ತೊಡಗಿಸಿಕೊಂಡ ಗ್ರಾಮ‌ ವ್ಯಾಪ್ತಿಗಳ ಎಲ್ಲಾ ಇಸಿಜಿ ಕೇಂದ್ರ ಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶ್ರಮಿಸಿದ ದಾದಿಯರು ಹಾಗೂ ವೈದ್ಯರ ಸೇವೆಗಳನ್ನು ಶ್ಲಾಘಿಸಿ, ಶಿಬಿರ ಆಯೋಜಿಸಿದ ಆಯೋಜಕರಿಗೆ ಅಭಿನಂದಿಸಿದರು‌

ಈ ಸಂದರ್ಭದಲ್ಲಿ ಮಲೇಕಾ ಮಣಿಪಾಲದ ಡೀನ್ ಉಲ್ಲಾಸ್ ಕಾಮತ್, ಶರತ್ ರಾವ್ , ಡಾ. ನಿರಂಜನ್ , ಕಾರ್ಕಳ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಯ ಮುಖ್ಯ ವೈದ್ಯಾಧಿಕಾರಿ ಕೀರ್ತಿನಾಥ ಬಳ್ಳಾಲ್ , ಅಜೆಕಾರು ಶಾರದೋತ್ಸವ ಸಮಿತಿಯ ಸಂದೀಪ್ ಶೆಟ್ಟಿ, ನಡಿಮಾರು ಜಯರಾಜ್ ಹೆಗ್ಡೆ , ಪ್ರದೀಪ್ ನಾಯಕ್, ಅಜೆಕಾರು ರಾಮ ಮಂಡಿರ ಟ್ರಸ್ಟ್‌ ನ ಅಧ್ಯಕ್ಷ ಪ್ರೇಮಾನಂದ ನಾಯಕ್, ಉಪಸ್ಥಿತರಿದ್ದರು.ಇದೇವೇಳೆ ಡಾ|ಪದ್ಮನಾಭ ಕಾಮತ್ ಅವರನ್ನು ಸನ್ಮಾನಿಸಲಾಯಿತು.

ರವೀಂದ್ರ ನಾಯಕ್ ವಂದಿಸಿ,ಸುಭಾಶ್ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 750 ಕ್ಕೂ ಅಧಿಕ ಶಿಭಿರಾರ್ಥಿಗಳು , 500 ಕ್ಕೂ ಅಧಿಕ ಇಸಿಜಿ , 47 ನುರಿತ ವೈದ್ಯರುಗಳು,20 ಸಮುದಾಯ ಅಧಿಕಾರಿಗಳು , 100 ಸ್ವಯಂಸೇವಕರು, 30 ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

 

             

Leave a Reply

Your email address will not be published. Required fields are marked *