ಕಾರ್ಕಳ: ಅಜೆಕಾರಿನ ದೆಪ್ಪುತ್ತೆಯ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ ಸಂಬಂಧ ಅವರ ಪತ್ನಿ ಪ್ರತಿಮಾ ಸಲ್ಲಿಸಿದ್ದ ಜಾಮೀನು ವಿಚಾರಣೆ ಮಂಗಳವಾರ ನಡೆದಿದ್ದು, ಕಾರ್ಕಳದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯದ ಸಂಚಾರಿ ಪೀಠದ ನ್ಯಾಯಾಧೀಶರು ಮಾ. 18ಕ್ಕೆ ತೀರ್ಪು ನೀಡಲಿದ್ದಾರೆ.
ಬಾಲಕೃಷ್ಣ ಪೂಜಾರಿಯ ಪತ್ನಿ ಪ್ರತಿಮಾಗೆ ಇನ್ಸ್ಟಾಗ್ರಾಂ ಮೂಲಕ ಕಾರ್ಕಳದ ಹೊಟೇಲ್ ಮಾಲೀಕ ದಿಲೀಪ್ ಹೆಗ್ಡೆ ಎಂಬಾತ ಪರಿಚಯವಾಗಿತ್ತು. ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ಇವರಿಬ್ಬರ ನಡುವೆ ಅನೈತಿಕ ಸಂಬAಧಕ್ಕೆ ಕಾರಣವಾಯಿತು. ಪತ್ನಿಯ ಪಲ್ಲಂಗದಾಟದ ವಿಚಾರ ಗಂಡನ ಗಮನಕ್ಕೆ ಬಂದು ಬಳಿಕ ಅಜೆಕಾರು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಕೊನೆಗೂ ಗಂಡನ ಬಲವಂತಕ್ಕೆ ಪ್ರತಿಮಾ ಒಲ್ಲದ ಮನಸ್ಸಿನಿಂದ ಗಂಡನ ಜತೆಗಿದ್ದಳು,ಇದೇ ವಿಚಾರದಲ್ಲಿ ಠಾಣೆಯಲ್ಲಿ ಎನ್’ಸಿಅರ್ ಕೂಡ ದಾಖಲಾಗಿತ್ತು.
ಆದರೆ ತಮ್ಮ ಅಕ್ರಮ ಸಂಬAಧಕ್ಕೆ ಅಡ್ಡಿಯಾಗುತ್ತಾನೆ ಎಂದರಿತ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಬಾಲಕೃಷ್ಣ ಪೂಜಾರಿಯನ್ನು ಆಹಾರದಲ್ಲಿ ಸ್ಲೋ ಪಾಯಿಸನ್ ನೀಡಿ ಕೊಲ್ಲುವ ಭಯಾನಕ ಸಂಚು ರೂಪಿಸಿದ್ದರು. ಪತಿಯ ಹತ್ಯೆ ಸಂಚು ಮನೆಯವರಿಗೆ ಅನುಮಾನ ಬರದಿರಲಿ ಎಂದು ಆತನ ಆರೋಗ್ಯ ಕೆಟ್ಟಾಗ ಪ್ರತಿಮಾಲೇ ಪತಿಯನ್ನು ಚಿಕಿತ್ಸೆ ನೀಡುವ ನೆಪದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಳು, ಆತನನ್ನು ಪದೇಪದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಬದಲಾಯಿಸಿ ಕೊನೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ ಬಳಿಕ ಮೃತ ಬಾಲಕೃಷ್ಣ ಪೂಜಾರಿ ಸಹೋದರಿ ಆಸ್ಪತ್ರೆಯಲ್ಲಿ ಆರೋಗ್ಯದ ಕುರಿತು ನಿಗಾವಹಿಸಿದ ಹಿನ್ನೆಲೆಯಲ್ಲಿ ಬಾಲಕೃಷ್ಣ ಪೂಜಾರಿ ಚೇತರಿಸಿಕೊಂಡಿದ್ದರು. ಇದಾದ ಬಳಿಕ ತನ್ನ ತಂತ್ರಗಾರಿಕೆ ಕೈಕೊಡುವ ಭಯದಿಂದ ಅಕ್ಟೋಬರ್ ೧೮ ರ ತಡರಾತ್ರಿ ಪ್ರತಿಮಾ ಬಲವಂತವಾಗಿ ಪತಿಯನ್ನು ಬೆಂಗಳೂರಿನಿAದ ಅಜೆಕಾರಿಗೆ ಕರೆತಂದಿದ್ದಳು. ಬಳಿಕ ಅಂದು ರಾತ್ರಿಯೇ ಪ್ರಿಯತಮ ದಿಲೀಪ್ ಹೆಗ್ಡೆಯನ್ನು ಕರೆಸಿಕೊಂಡು ಮಲಗಿದ್ದಲ್ಲಿ ದಿಂಬಿನಿAದ ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆ ಮಾಡಿದ್ದರು ಎಂದು ಇಬ್ಬರು ಆರೋಪಿಗಳು ಪೊಲೀಸರ ತನಿಖೆಯಲ್ಲಿ ಬಾಯಿಬಿಟ್ಟಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಜೆಕಾರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರತಿಮಾ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಸೋಮವಾರ ಆಕ್ಷೇಪ ಸಲ್ಲಿಸಿದ್ದು, ಮಂಗಳವಾರ ಜಾಮೀನು ಅರ್ಜಿಯ ಕುರಿತಂತೆ ವಿಚಾರಣೆ ಮುಗಿದಿದೆ.
ಇದಕ್ಕೂ ಮೊದಲು ಪ್ರಕರಣದ ಮತ್ತೋರ್ವ ಆರೋಪಿ ದಿಲೀಪ್ ಹೆಗ್ಡೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
K