Share this news

ಕಾರ್ಕಳ: ಅಜೆಕಾರಿನ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ತನಿಖೆ ಇಳಿದಿರುವ ಪೊಲೀಸರಿಗೆ ಬಗೆದಷ್ಟು ಹೊಸಹೊಸ ಅಂಶಗಳು ಬಯಲಾಗುತ್ತಿವೆ. ಪ್ರಿಯಕರನ ಜತೆಗೆ ಸೇರಿ ಪತಿಗೆ ಚಟ್ಟ ಕಟ್ಟಿದ್ದ ಪಾತಕಿ ಪತ್ನಿ ಪ್ರತಿಮಾಳ ಕ್ರಿಮಿನಲ್ ಸಂಚಿನ ವಿಚಾರಗಳೇ ಘನಘೋರ. ಪತಿ ಬಾಲಕೃಷ್ಣ ಪೂಜಾರಿಯ ಸಾವಿನಲ್ಲಿ ಯಾರಿಗೂ ಅನುಮಾನ ಬಾರದಂತೆ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ರಹಸ್ಯವಾಗಿ ಪ್ಲಾನ್ ಸಿದ್ಧಪಡಿಸಿದ್ದರು. ಹಂತಕಿ ಪ್ರತಿಮಾಳಿಂದ ಕೊಲೆ ಪ್ರಕರಣದ ಇನ್ನಷ್ಟು ಮಾಹಿತಿ ಪಡೆಯಲು ಪೊಲೀಸರು ಮತ್ತೆ ಅವಳನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರಿಯಕರ ದಿಲೀಪ್ ಹೆಗ್ಡೆಯಿಂದ ವಿಷ ಪಡೆದ ಬಳಿಕ ಗಣೇಶ ಹಬ್ಬದ ದಿನದಿಂದಲೇ ಗಂಡನಿಗೆ ಪಾಯಸದಲ್ಲಿ ಸ್ಲೋ ಪಾಯಿಸನ್ ಬೆರಸಿಕೊಟ್ಟಿದ್ದಳು.ಬಳಿಕ ನಿರಂತರವಾಗಿ ಊಟದಲ್ಲಿ ಬೆರೆಸುತ್ತಲೇ ಬಂದಿದ್ದಳು. ವಿಷ ಪ್ರಾಶನದಿಂದ ಗಂಡ ಬಾಲಕೃಷ್ಣ ಪೂಜಾರಿ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ತನ್ನ ಒಂದು ಹಂತದ ಪ್ಲಾನ್ ಸಕ್ಸಸ್ ಆಗಿರುವ ಬಗ್ಗೆ ನಟೋರಿಯಸ್ ಪತ್ನಿ ಪ್ರತಿಮಾ ಒಳಗೊಳಗೋ ಖುಷಿಪಟ್ಟಿದ್ದಳು. ಪತಿಯ ಆರೋಗ್ಯ ಹದಗೆಟ್ಟ ಬಳಿಕ ಸಂಬAಧಿಕರು ಹಾಗೂ ಊರಿನವರ ಕಣ್ಣಿನ ಮಣ್ಣೆರೆಚಲು ಪತಿಗೆ ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದಳು. ಗಂಡನ ಚಿಕಿತ್ಸೆಗಾಗಿ ಈಕೆ ಬರೋಬ್ಬರಿ 5 ಆಸ್ಪತ್ರೆಯನ್ನು ಬದಲಿಸಿರುವುದು ಯಾಕೆ ಎನ್ನುವ ಅನುಮಾನ ಇದೀಗ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಆಧುನಿಕ ಕಾಲದಲ್ಲಿ ವ್ಯಕ್ತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ ರೋಗಪತ್ತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ ನಮ್ಮ ವೈದ್ಯಕೀಯ ವ್ಯವಸ್ಥೆಯಲ್ಲಿದೆ. ಆದರೆ ಬಾಲಕೃಷ್ಣ ಪೂಜಾರಿಗೆ ಇರುವ ಆರೋಗ್ಯದ ತೊಂದರೆ ಹಾಗೂ ವೈದ್ಯಕೀಯ ಚಿಕಿತ್ಸಾ ವರದಿ, ಡಿಸ್ಚಾರ್ಜ್ ವಿವರಗಳ ದಾಖಲೆಗಳು ಎಲ್ಲಿವೆ ಎನ್ನುವ ಅನುಮಾನ ದಟ್ಟವಾಗಿದೆ. ಗಂಡನ ಚಿಕಿತ್ಸೆಯ ಸಂದರ್ಭದಲ್ಲಿ ಆತನ ಸಂಬAಧಿಕರಿಗೆ ವೈದ್ಯಕೀಯ ವರದಿ ಸೇರಿದಂತೆ ಯಾವುದೇ ಮಾಹಿತಿ ಕೂಡ ನೀಡದೇ ಪ್ರತಿಮಾ ಗೌಪ್ಯತೆ ಕಾಪಾಡಿಕೊಂಡಿದ್ದಳೇ ಎನ್ನುವ ಸಂದೇಹ ಬಲವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ವೈದ್ಯಕೀಯ ವರದಿಯ ಕುರಿತು ಬಾಲಕೃಷ್ಣ ಪೂಜಾರಿ ಸಂಬAಧಿಕರೇ ಅನುಮಾನ ವ್ಯಕ್ತಪಡಿಸಿದ್ದು,ವಿಷಪ್ರಾಶನದ ಮೂಲಕ ಕೊಲೆ ಸಂಚು ಮತ್ತಷ್ಟು ಬಲವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಬಾಲಕೃಷ್ಣ ಪೂಜಾರಿಯವರನ್ನು ಚಿಕಿತ್ಸೆಗೆಂದು ದಾಖಲಿಸಿರುವ ಆಸ್ಪತ್ರೆಗಳಲ್ಲಿ ನೀಡಿದ್ದ ಚಿಕಿತ್ಸಾ ವಿಧಾನ ಹಾಗೂ ವೈದ್ಯಕೀಯ ವರದಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದರೆ ಈ ಪ್ರಕರಣದಲ್ಲಿ ಮತ್ತಷ್ಟು ವಿಷಯಗಳು ಬಹಿರಂಗವಾಗಲಿವೆ.

ಜೈಲಿನಿAದಲೇ ಕರೆ ಮಾಡಿ ಚಿನ್ನ ನೀಡುವಂತೆ ಸೂಚಿಸಿದ ಕೊಲೆಗಾತಿ ಪ್ರತಿಮಾ?
ಗಂಡನನ್ನು ಕೊಲೆಗೈದು ರಾಜಾರೋಷವಾಗಿ ಜೈಲು ಸೇರಿರುವ ಕಿಲ್ಲರ್ ಪ್ರತಿಮಾ ಜೈಲಿನಲ್ಲಿದ್ದುಕೊಂಡೇ ಹೊರಬರುವ ಕುರಿತು ರಣತಂತ್ರ ಹೆಣೆಯುತ್ತಿದ್ದಾಳೆ ಎನ್ನಲಾಗುತ್ತಿದೆ. ಒಂದುವೇಳೆ ಜಾಮೀನಿಗೆ ಅರ್ಜಿ ಸಲ್ಲಿಸಬೇಕಿದ್ದರೆ ಹಣಕಾಸಿನ ವ್ಯವಸ್ಥೆ ಮಾಡಬೇಕಿದ್ದು ಇದಕ್ಕೆ ಪೂರಕ ಎಂಬAತೆ ಆಕೆ ಜೈಲಿನಿಂದ ಕರೆ ಮಾಡಿ ತನ್ನ ಚಿನ್ನಾಭರಣ ಕೊಡುವಂತೆ ಹೇಳಿದ್ದಾಳೆ ಎಂದು ಆಕೆಯ ಸಹೋದರ ಹೇಳಿದ್ದು, ಈಕೆಗೆ ಗಂಡನ ಕೊಲೆ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪ ಭಾವನೆ ಇಲ್ಲವೇ ಎನ್ನುವಂತಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *