
ಕಾರ್ಕಳ, ಮಾ. 8: ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಹೆರ್ಮುಂಡೆ ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ಹೆರ್ಮುಂಡೆಯ ಶಂಕರ ಪೂಜಾರಿ(59) ಮೃತಪಟ್ಟವರು.
ಅವರಿಗೆ ಸುಮಾರು 2 ವರ್ಷಗಳಿಂದ ಕಾಲುಗಳು ದಪ್ಪಗಾಗುವ ಖಾಯಿಲೆಯ ಇದ್ದು, ಅಜೆಕಾರು ಮತ್ತು ಕಡ್ತಲದ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಾ. 7 ರಂದು ಮನೆಯಲ್ಲಿ ಒಮ್ಮೆಲೇ ಬಿಪಿ ಕಡಿಮೆಯಾಗಿ ಅಸ್ವಸ್ಥಗೊಂಡವರನ್ನು ಅಜೆಕಾರು ಕ್ಲಿನಿಕ್ ಗೆ ಕರೆದೊಯ್ದು, ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಶಂಕರ ಮೃತಪಟ್ಟಿದ್ದರು.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
