Share this news

ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರು ಮಿತ್ತೊಟ್ಟುಗುತ್ತು ಗ್ರಾಮ ಛಾವಡಿಯಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಕೊಡಮಣಿತ್ತಾಯ ದೈವಸ್ಥಾನ,ಪರಿವಾರ ದೈವಗಳ ಹಾಗೂ ಬ್ರಹ್ಮಬೈದರ್ಕಳ ಗರಡಿಯ ದೈವಗಳ ಬಿಂಬ ಪುನಃಪ್ರತಿಷ್ಠೆ,ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ನೇಮೋತ್ಸವವು ಏ.19ರಿಂದ ಏ 24ರವರೆಗೆ ನಡೆಯಲಿದೆ.

ಏ.21 ರಂದು ಭಾನುವಾರ ಬೆಳಗ್ಗೆ ಗಣಯಾಗ,ತೋರಣ ಮುಹೂರ್ತ,ಕಲಶ ಹೋಮ,ಬಿಂಬ ಶುದ್ಧಿ,ಶಿಖರ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ದೈವ ದರ್ಶನದ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 8 ರಿಂದ ಧರ್ಮರಸು ದೈವದ ನೇಮೋತ್ಸವ ನಡೆಯಲಿದೆ

ಏ.22ರಂದು ಸಂಜೆ 5.30 ಕ್ಕೆ ಧಾರ್ಮಿಕ ಸಭೆ, ಬಳಿಕ ಸಂಜೆ 7ರಿಂದ ಕೊಡಮಣಿತ್ತಾಯ ಹಾಹೂ ಕುಕ್ಕಿನಂತಾಯ ದೈವಗಳ ನೇಮೋತ್ಸವ ನಡೆಯಲಿದೆ.

ಏ.23 ರಂದು ರಾತ್ರಿ 8 ಗಂಟೆಗೆ ಬ್ರಹ್ಮಬೈದರ್ಕಳ ನೇನ,ಮಾಯಂದಾಲೆ, ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ರತ್ನವರ್ಮ ಜೈನ್ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

 

 

 

 

 

 

 

 

Leave a Reply

Your email address will not be published. Required fields are marked *