ಕಾರ್ಕಳ: ಕಳೆದ ಹಲವು ವರ್ಷಗಳಿಂದ ಶೇ 100ರ ಫಲಿತಾಂಶದೊಂದಿಗೆ ಅಜೆಕಾರು ಜ್ಯೋತಿ ಪದವಿ ಪೂರ್ವ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಣ ಸಂಸ್ಥೆಯಾಗಿದೆ.
ಈ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗಕ್ಕೆ ಈಗಾಗಲೇ ಪ್ರವೇಶ ಆರಂಭಗೊಂಡಿದ್ದು, ಅರ್ಜಿಗಳನ್ನು ವಿತರಿಸಲಾಗುತ್ತಿದೆ.
ವಾಣಿಜ್ಯ ವಿಭಾಗದಲ್ಲಿ ಭಾಷಾ ಮಾಧ್ಯಮದಲ್ಲಿ ಕನ್ನಡ/ ಹಿಂದಿ ಹಾಗೂ ಐಚ್ಚಿಕ ವಿಷಯಗಳಾದ ಎಕನಾಮಿಕ್ಸ್, ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ ಹಾಗೂ ಕಂಪ್ಯೂಟರ್ ಸೈನ್ಸ್ ಅಥವಾ ಇತಿಹಾಸ ಅಯ್ಕೆಗೆ ಅವಕಾಶವಿದೆ. ಎಸೆಸ್ಸೆಲ್ಸಿಯಲ್ಲಿ ಶೇ 95 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷ ಉಚಿತ ಪ್ರವೇಶದೊಂದಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಇದಲ್ಲದೇ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿ ವೇತನ,ಕ್ರೀಡಾ ಕೋಟಾದಡಿ ವಿದ್ಯಾರ್ಥಿ ವೇತನ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾ ವೇತನ ನೀಡಲಾಗುತ್ತದೆ.
ಅಜೆಕಾರು ಜ್ಯೋತಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಬದ್ದತೆಯೊಂದಿಗೆ ನುರಿತ ಉಪನ್ಯಾಸಕರು ಹಾಗೂ ಸುಸಜ್ಜಿತ ಕ್ಲಾಸ್ ರೂಮ್ , ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಲೈಬ್ರರಿ ವ್ಯವಸ್ಥೆ, ವಿಶಾಲವಾದ ಆಟದ ಮೈದಾನವನ್ನು ಒಳಗೊಂಡಿದೆ.
ಮುನಿಯಾಲು, ದೊಂಡೇರಂಗಡಿ,ಕಡ್ತಲ,ಎಣ್ಣೆಹೊಳೆ,ಕೆರ್ವಾಶೆ,ಶಿರ್ಲಾಲು,ಹೆರ್ಮುಂಡೆ ಕಡೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈಗಾಗಲೇ ಪ್ರವೇಶಕ್ಕಾಗಿ ಅರ್ಜಿಗಳನ್ನು ಪಡೆದುಕೊಂಡಿದ್ದು, ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.
ಹೆಚ್ಚಿನ ಮಾಹಿತಿ ಹಾಗೂ ದಾಖಲಾತಿಗಾಗಿ : 9480642778 ಸಂಪರ್ಕಿಸಬಹುದಾಗಿದೆ.
