
ಕಾರ್ಕಳ, ಮಾ13: ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ವ್ಯಕ್ತಿಯೊಬ್ಬರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಜೆಕಾರು ಕುರ್ಪಾಡಿ ರಸ್ತೆ ನಿವಾಸಿ ವಿಜಯ ಆಚಾರ್ಯ ( 55ವ) ಮೃತಪಟ್ಟವರು.
ವಿಜಯ ಅವರು ಗುರುವಾರ ಬೆಳಿಗ್ಗೆ ಗುಡ್ಡೆಯಂಗಡಿಯಲ್ಲಿರುವ ತಮ್ಮ ತೋಟದ ಕೆಲಸಕ್ಕೆ ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಅವರ ಪತ್ನಿಯ ತಂದೆ ತೋಟಕ್ಕೆ ಹೋದಾಗ ವಿಜಯ ಅವರು ಗೊಬ್ಬರದ ರಾಶಿಯ ಮೇಲೆ ಕುಸಿದು ಬಿದ್ದಿದ್ದರು.
ಕೂಡಲೇ ಅವರನ್ನು ಅಜೆಕಾರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಆ ವೇಳೆಗಾಗಲೇ ಮೃತಪಟ್ಟಿದ್ದರು.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
