ಕಾರ್ಕಳ: ಅಜೆಕಾರಿನಲ್ಲಿ ಪ್ರಿಯಕರನ ಜತೆಸೇರಿ ಪತ್ನಿ ತನ್ನ ಗಂಡನನ್ನು ವಿಷವಿಕ್ಕಿ ಬಳಿಕ ಆತ ಚಿಕಿತ್ಸೆಯಿಂದ ಬದುಕಿದ ಬಳಿಕ ವಿಚಲಿತಳಾಗಿ ಗಂಡನನ್ನು ಕೊಂದೇಬಿಟ್ಟಿರುವ ಈ ಪ್ರಕರಣ ಇಡೀ ಹೆಣ್ಣು ಕುಲವೇ ತಲೆತಗ್ಗಿಸುವಂತಾಗಿದೆ. ಕೊಲೆ ಪ್ರಕರಣ ಆರೋಪಿಯಾದ ಪ್ರತಿಮಾಳ ಈ ಭಯಾನಕ ಕೃತ್ಯದ ರಹಸ್ಯಗಳು ಒಂದೊಂದಾಗಿ ಹೊರಬರುತ್ತಿದೆ. ಗಂಡ ಬಾಲಕೃಷ್ಣ ಪೂಜಾರಿ ಅನಾರೋಗ್ಯದಿಂದ ಸಹಜ ಸಾವನ್ನಪ್ಪಿದ ಎಂದು ಬಿಂಬಿಸಲು ಪ್ರಿಯಕರ ದಿಲೀಪ್ ಹೆಗ್ಡೆ ಜತೆ ಸೇರಿ ಆತನಿಗೆ ಆರ್ಸೆನಿಕ್ ಟ್ರೈಆಕ್ಸೈಡ್ ಎನ್ನುವ ಸ್ಲೋ ಪಾಯಿಸನ್ ಹಾಕಿದ್ದಳು ಎಂದು ಉಡುಪಿ ಎಸ್ಸಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ವಿಷವನ್ನು ಪ್ರಿಯಕರ ದಿಲೀಪ್ ಹೆಗ್ಡೆ ಉಡುಪಿಯ ಒಳಕಾಡು ರಾಮನ್ಸ್ ಲ್ಯಾಬ್ ನಿಂದ ಪಡೆದಿದ್ದ ಎನ್ನಲಾಗಿದೆ.
ಆರ್ಸೆನಿಕ್ ಟ್ರೈಆಕ್ಸೈಡ್! ರಾಸಾಯನಿಕ ವಸ್ತು ಹೆಚ್ಚು ವಿಷಕಾರಿ ಮತ್ತು ಬಹುಮುಖ ಸಂಯುಕ್ತ ವಸ್ತು ವಾಗಿದೆ.ಇದನ್ನು ಹೆಚ್ಚಾಗಿ ಶಾಲಾ ಕಾಲೇಜುಗಳ ಲ್ಯಾಬ್ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬಿಳಿ ಅಥವಾ ಹಳದಿ ಬಣ್ಣದಪುಡಿ ಯಾಗಿದ್ದು ವಾಸನೆಯಿಲ್ಲ , ಈ ವಿಷಕಾರಿ ವಸ್ತು ನೀರು,ಎಥೆನಾಲ್ ಮತ್ತು ಇತರ ಸಾವಯವ ದ್ರಾವಕಗಳಲ್ಲಿ ಕರಗುತ್ತದೆ.
ಆರ್ಸೆನಿಕ್ ಟ್ರೈಆಕ್ಸೈಡ್ ಸೇವನೆಯಿಂದ ವಾಕರಿಕೆ ಅತಿಸಾರ ಹೊಟ್ಟೆ ನೋವು, ಆಯಾಸ ತಲೆನೋವು ತಲೆತಿರುಗುವಿಕೆ ನರ ದೌರ್ಬಲ್ಯ, ರಕ್ತಹೀನತೆ, ಪ್ಲೇಟ್ಲೆಟ್ ಕುಸಿತ, ಬಿಳಿರಕ್ತ ಕಣಗಳ ಸಂಖ್ಯೆ ಇಳಿಕೆ, ಹೃದಯ ಸ್ಥಂಭನ, ಉಸಿರಾಟದ ಸಮಸ್ಯೆ, ಕೋಮಾ,ಯಕೃತ್ತಿಗೆ ಹಾನಿ, ಮೂತ್ರಪಿಂಡ ವೈಫಲ್ಯ,ಸೆಕೆಂಡರಿ ಕ್ಯಾನ್ಸರಿಗೂ ಕಾರಣವಾಗುತ್ತದೆ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ.
ಈ ವಿಷಪ್ರಾಶನದಿಂದ ಗಂಡನ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ನೆಪದಲ್ಲಿ ಆತನ ದೇಹದಲ್ಲಿ ಸೇರಿದ ವಿಷದ ಅಂಶದ ವೈದ್ಯಕೀಯ ವರದಿಯನ್ನು ಬಹಿರಂಗಪಡಿಸದೇ ಬಚ್ಚಿಟ್ಟಿದ್ದಳೇ ಎನ್ನುವ ಅನುಮಾನವೂ ಮೂಡಿದೆ. ಗಂಡನ ಸಾವನ್ನೇ ಬಯಸಿದ್ದ ಪತ್ನಿ ಕಿಲ್ಲರ್ ಪ್ರತಿಮಾ ಗಂಡನನ್ನು ಚಿಕಿತ್ಸೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೇರೆ ಯಾರನ್ನೂ ಇರಲು ಬಿಟ್ಟಿಲ್ಲ. ಗಂಡನಿಗೆ ಬೇರೆಬೇರೆ ಆಸ್ಪತ್ರೆಗೆ ಚಿಕಿತ್ಸೆ ನೀಡುವ ನಾಟಕವಾಡಿದ್ದಳು.ಅಂತಿಮವಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಗುಣಮುಖರಾಗುವ ಲಕ್ಷಣಗಳು ಗೋಚರಿಸಿದಾಗ ಆಕೆ ಗಂಡನ ಕಥೆ ಮುಗಿಸುವ ನಟೋರಿಯಸ್ ಪ್ಲಾನ್ ರೂಪಿಸಿದ್ದಳು. ಗಂಡ ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ಮನೆಯಿಂದ ಎಲ್ಲರನ್ನೂ ಕಳುಹಿಸಿ ಅಂದೇ ರಾತ್ರಿ ಪ್ರಿಯಕರನನ್ನು ಮನೆಗೆ ಕರೆಸಿ ಕೊಂದು ಗಂಡ ಸತ್ತ ಎಂದು ಕಣೀರು ಹಾಕಿ ನಾಟಕವಾಡಿದ್ದಳು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಎಲುಬಿನ ಪರೀಕ್ಷೆ ಸ್ಯಾಂಪಲ್ ಸಂಗ್ರಹಿಸಿದ FSL ತಂಡ
ಮೃತ ಬಾಲಕೃಷ್ಣ ಸಾವಿನ ಕಾರಣ ಹಾಗೂ ಪೂರಕ ಸಾಕ್ಷ್ಯ ಕಲೆಹಾಕಲು ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಬಾಲಕೃಷ್ಣ ಪೂಜಾರಿ ಎಲುಬಿನ ಸ್ಯಾಂಪಲ್ ಪಡೆದಿದ್ದಾರೆ ಎನ್ನಲಾಗಿದ್ದು, ಇತ್ತ ಪೋಲಿಸರು ಆರೋಪಿ ದಿಲೀಪ್ ಹೆಗ್ಡೆ ತಂದು ಕೊಟ್ಟಿದ್ದ ವಿಷದ ಖಾಲಿ ಬಾಟಲಿ ಎಸೆದ ಕುಕ್ಕುಂದೂರಿನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.ಇದಲ್ಲದೇ ಪೋಲೀಸರು ರಾಮನ್ಸ್ ಲ್ಯಾಬ್ ಮಾಲೀಕನಾದ ಗುಂಡೂರಾವ್ ಹಾಗೂ ಆತನ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಹಾಗೂ ಎ1 ಆರೋಪಿಗಳಾದ ಪ್ರತಿಮಾಳಿಂದ 2 ಮೊಬೈಲ್, ಎ 2 ಆರೋಪಿ ದಿಲೀಪ್ ಹೆಗ್ಡೆಯಿಂದ 1 ಮೊಬೈಲ್ ಮತ್ತು 2 ಸಿಮ್ ಸೇರಿದಂತೆ ಒಟ್ಟು 4 ಮೊಬೈಲ್ ಕಾರು ಹಾಗೂ ಬೈಕನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.