ಅಜೆಕಾರು: ಅಜೆಕಾರು ಬ್ರಾಹ್ಮಣ ಸಂಘದ ವತಿಯಿಂದ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ, ಸಂಕೀರ್ತನೆ, ವಿಪ್ರ ಮಹಿಳೆಯರಿಂದ ಲಕ್ಮೀ ಶೋಭಾನೆ ಕಾರ್ಯಕ್ರಮವು ಆ.10 ರಂದು ಅರ್ಚಕ ವೇದಮೂರ್ತಿ ಕೃಷ್ಣಮೂರ್ತಿ ಭಟ್ ಇವರ ನೇತೃತ್ವದಲ್ಲಿ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮವು ಸುಮಾರು 23 ವರ್ಷಗಳಿಂದ ಗ್ರಾಮಸ್ಥರ ಸಹಕಾರದಲ್ಲಿ ಬಹಳ ಯಶಸ್ವಿಯಾಗಿ ನಡೆಯುತ್ತಿರುವುದಾಗಿ ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜ ಪುತ್ರಾಯ ಹೇಳಿದರು. ಸಂಘದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.