ಕಾರ್ಕಳ: ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಏ 14ರಿಂದ ಏ 19ರವರೆಗೆ ಕೊರಂಗ್ರಪಾಡಿ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿಜರುಗಲಿದೆ. ಏ 14ರಂದು ಉಗ್ರಾಣ ಮುಹೂರ್ತದ ಬಳಿಕ ಬೆಳಗ್ಗ 11.05ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಬಳಿಕ ಗಣಹೋಮ, ಮಹಾಪೂಜೆ, ರಾತ್ರಿ ರಂಗಪೂಜೆ ನಡೆಯಲಿದೆ. ಏ 15ರಂದು ದೇವರಿಗೆ ಕಲಶಾಭಿಷೇಕ ಬಳಿಕ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ, ತದನಂತರ ಕೊಡಮಣಿತ್ತಾಯ, ಕುಕ್ಕಿಂನAತಾಯ ದೈವಗಳ ಬಿಂಬಗಳನ್ನು ನೂತನ ಮಂಚದಲ್ಲಿ ಪ್ರತಿಷ್ಟಾಪನೆ, ದರ್ಶನ ಸೇವೆ, ರಾತ್ರಿ ಮಹಾಪೂಜೆ,ನಿತ್ಯಬಲಿ, ರಂಗಪೂಜೆ ನಡೆಯಲಿದೆ
ಏ 16ರಂದು ಬೆಳಗ್ಗೆ ಕಲಶಾಭಿಷೇಕ, ಮಧ್ಯಾಹ್ನ ಮಹಾ ಚಂಡಿಕಾ ಯಾಗ, ಮಹಾಪೂಜೆ ಸಂಜೆ 5.30 ರಿಂದ ದೇವಸ್ಯ ಶಿವರಾಮ ಜಿ ಶೆಟ್ಟಿ ಮತ್ತು ಕುಟುಂಬಸ್ಥರ ಸೇವೆಯ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿAದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.ರಾತ್ರಿ 9 ಗಂಟೆಗೆ ರಂಗಪೂಜೆ, ಉತ್ಸವ ಬಲಿ, ಮಹಾಪೂಜೆ ನಡೆಯಲಿದೆ
ಏ 17ರಂದು ಬೆಳಗ್ಗೆ ಕಲಶಾಭಿಷೇಕ, ರಥಸಂಪ್ರೋಕ್ಷಣೆ, ಮಹಾಪೂಜೆ, ರಥಾರೋಹಣ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 7ರಿಂದ ರಥೋತ್ಸವ,ಕೆರೆದೀಪ,ಭೂತಬಲಿ, ಕವಾಟ ಬಂಧನ, ಏ 18 ರಂದು ಬೆಳಗ್ಗೆ ಕವಾಟೋದ್ಘಾಟನೆ,ಹಗಲು ರಥೋತ್ಸವ, ವಸಂತಪೂಜೆ, ಮಹಾಪೂಜೆ, ಮಧ್ಯಾಹ್ನ 2.30ಕ್ಕೆ ದೈವಗಳ ಭಂಡಾರ ಇಳಿದು, ಸಂಜೆ 4 ರಿಂದ ದೈವಗಳ ಕೋಲ,ಅವಭೃತ ಸ್ನಾನ, ಕಟ್ಟೆಪೂಜೆ, ಧ್ವಜಾವರೋಹಣ,ಮಹಾಪೂಜೆ ನಡೆಯಲಿದೆ.
ಏ 19ರಂದು ಶುಕ್ರವಾರ ಸಂಪ್ರೋಕ್ಷಣೆ,ಮಹಾಪೂಜೆ, ಮಹಾಮಂತ್ರಾಕ್ಷತೆ,ಪ್ರಸಾದ ವಿತರಣೆ, ರಾತ್ರಿ ದುರ್ಗಾಪರಮೇಶ್ವರಿ ಅಮ್ಮನವರಿಗೆ ಸಣ್ಣ ರಂಗಪೂಜೆ ಬಳಿಕ ಮಾರಿಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ