ಅಜೆಕಾರು : ಕರ್ನಾಟಕ ಸರ್ಕಾರ ಸಾಕ್ಷಾರತಾ ಇಲಾಖೆ, ಕಾರ್ಕಳ ತಾಲೂಕು ಪಂಚಾಯತ್ ಹಾಗೂ ಚರ್ಚ್ ಆಂಗ್ಲ ಮಾಧ್ಯಮ ಶಾಲೆ ಅಜೆಕಾರು ಇವರ ಸಹಯೋಗದಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯು ಆ.7ರಂದು ನಡೆಯಿತು.
ಸೇಕ್ರೆಟ್ ಹಾರ್ಟ್ ಚರ್ಚ್ ಧರ್ಮ ಗುರುಗಳು ಹಾಗೂ ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಗುರು ಪ್ರವೀಣ್ ಅಮ್ರಿತ್ ಮಾರ್ಟೀಸ್ ಅಧ್ಯಕ್ಷತೆ ವಹಿಸಿದ್ದರು.
ಅರುಣೋದಯ ವಿಶೇಷ ಶಾಲೆಯ ಟ್ರಸ್ಟಿ , ಕ್ರೈಸ್ಟ್ ಕಿಂಗ್ ಚರ್ಚ್ ನ ಪಾಲನ ಮಂಡಳಿಯ ಸದಸ್ಯ ನೇವಿಲ್ ಡಿಸಿಲ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮರ್ಣೆ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್, ಕಾರ್ಕಳ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಕರ ಸಂಘ ದ ಅಧ್ಯಕ್ಷರು ಸಂತೋಷ್ ಶೆಟ್ಟಿ, ಕಾರ್ಕಳ ಪ್ರಾಥಮಿಕ ಶಾಲ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದ ಅಧ್ಯಕ್ಷ ಪಾಂಡುರAಗ ಆಚಾರ್ಯ , ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಕರಾಟೆಯ ರಾಜ್ಯ ಪ್ರದಾನ ಕಾರ್ಯದರ್ಶಿ ರವಿ ಸಾಲಿಯಾನ್,ಉಡುಪಿ ಕರಾಟೆ ಅಶೋಸಿಯೇಷನ್ ನ ಅಧ್ಯಕ್ಷ ರೋಹಿತಾಕ್ಷ, ಉಡುಪಿ ಕರಾಟೆ ಅಶೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ವಾಮಾನ ಪಾಲನ್ , ಅಜೆಕಾರ್ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಪ್ರಿತೇಶ್,ಸೇಕ್ರೆಟ್ ಹಾರ್ಟ್ ಚರ್ಚ್ ನ ಪಾಲನ ಮಂಡಳಿ ಸದಸ್ಯ ಜಾನ್ ಟೆಲ್ಲಿಸ್,ಚರ್ಚ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟೆರ್ ಪ್ರೆಸಿಲ್ಲ ಪುಟಡೋ, ಪೋಷಕ ಪ್ರತಿನಿಧಿ ಅಧ್ಯಕ್ಷ ಸ್ಟೀಪನ್ ಲೋಬೊ ಹಾಗೂ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು, ಪ್ರತಿ ತಂಡದ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಸುಮಿತ್ರ ಸ್ವಾಗತಿಸಿ, ವಿಜೇತ ರಾಣಿ ಕಾರ್ಯಕ್ರಮ ನಿರೂಪಿಸಿದರು. ಅರ್ಪಿತಾ ವಂದನಾರ್ಪಣೆಗೈದರು.
`