ಕಾರ್ಕಳ : ಪ್ರಥಮೈಕಾದಶೀ ಪ್ರಯುಕ್ತ ಅಜೆಕಾರು ಗುಡ್ಡೆಯಂಗಡಿ ಹರಿವಾಯು ಕೃಪಾದಲ್ಲಿ ಜು 6 ರಂದು ಬಾಳಗಾರು ಮಠಾಧೀಶ ಶ್ರೀ ರಘುಭೂಷಣ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ತಪ್ತ ಮುದ್ರಾಧಾರಣೆ ನಡೆಯಿತು.
ತಪ್ತ ಮುದ್ರಾಧಾರಣೆ ಕಾರ್ಯಕ್ರಮ ನೆರವೇರಿಸಿ ಶ್ರೀಗಳು ಮಾತನಾಡಿ,
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋಗುಣಗಳನ್ನು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಗುರುಗಳಿಂದ ತಪ್ತಮುದ್ರಾಧಾರಣವನ್ನು ಪಡೆದುಕೊಳ್ಳಬೇಕಂದರು.
ವಿದ್ವಾನ್ ರಾಘವೇಂದ್ರ ಭಟ್ ಗುಡ್ಡೆಅಂಗಡಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ನೂರಾರು ವಿಪ್ರರು ಪಾಲ್ಗೊಂಡರು.
ವಿಪ್ರರಿಂದ ವಿಷ್ಣುಸಹಸ್ರನಾಮ, ಸಂಕೀರ್ತನೆ, ಭಜನೆ, ಮಹಿಳೆಯರಿಂದ ಶೋಭಾನೆ ನಡೆಯಿತು. ಸುದರ್ಶನ ಹೋಮವನ್ನು ವೇದಮೂರ್ತಿ ಪಳ್ಳಿ ಶ್ರೀನಿವಾಸ ಭಟ್ ನೆರವೇರಿಸಿದರು.