ಕಾರ್ಕಳ: ವಿಪರೀತ ಸೆಖೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸ್ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ.
ಮರ್ಣೆ ಗ್ರಾಮದ ಅಜೆಕಾರು ಬೊಂಡುಕುಮೇರಿ ನಿವಾಸಿ ಸುಂದರ ನಾಯ್ಕ್(55) ಮೃತಪಟ್ಟವರು.
ಸುಂದರ ನಾಯ್ಕ್ ಎಣ್ಣೆಹೊಳೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿದ್ದು, ಅವರು ವಿಪರೀತ ಸೆಕೆಯ ಕಾರಣದಿಂದ ಎಂದಿನಂತೆ ಬುಧವಾರ ರಾತ್ರಿ ಟೆರೇಸ್ ಮೇಲೆ ಹೋಗಿ ಮಲಗಿದ್ದ ವೇಳೆ ಗಾಢ ನಿದ್ದೆಯಲ್ಲಿದ್ದವರು ಮೂತ್ರವಿಸರ್ಜನೆಗೆಂದು ಎದ್ದು ನಡೆದುಕೊಂಡು ಹೋದಾಗ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ