Share this news

ಕಾರ್ಕಳ: ಮರ್ಣೆ ಗ್ರಾಮದ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ ಸಂಶಯಾಸ್ಪದ ಸಾವು ಪ್ರಕರಣದಲ್ಲಿ ಆತನ ಪತ್ನಿ ಹಾಗೂ ಪ್ರಿಯಕರನ ಕೈವಾಡ ಪೊಲೀಸರ ತನಿಖೆಯಿಂದ ಸಾಬೀತಾದ ಹಿನ್ನಲೆಯಲ್ಲಿ ಈಗಾಗಲೇ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನ ನಿವಾಸಿ ಹಾಗೂ ಕಾರ್ಕಳದ ಹೊಟೇಲ್ ಬಾಲಾಜಿ ಇನ್ ಮಾಲಕರ ಪುತ್ರ ದಿಲೀಪ್ ಹೆಗ್ಡೆ ಎಂಬವರನ್ನು ಅಜೆಕಾರು ಪೊಲೀಸರು ಈಗಾಗಲೇ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿ ಪ್ರತಿಮಾಳ ವಿಪರೀತ ರೀಲ್ಸ್ ಚಟ ಹಾಗೂ ಹಣದ ದಾಹವು ಪರಸಂಗದಾಟಕ್ಕೆ ಕಾರಣವಾಗಿ ಕೊನೆಗೆ ಆಕೆಯೇ ತನ್ನ ಪ್ರಿಯಕರನ ಜತೆ ಸೇರಿ ಗಂಡನ ಕಥೆ ಮುಗಿಸಿದ್ದಾಳೆ.
ಬಾಲಕೃಷ್ಣ ಪೂಜಾರಿ ತನ್ನ ಪತ್ನಿಗೆ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಹಾಕಿ ಕೊಟ್ಟ ಬಳಿಕ ಪ್ರತಿಮಾಳ ಲೈಫ್ ಸ್ಟೈಲ್ ಸಂಪೂರ್ಣ ಬದಲಾಯಿತು. ಬ್ರೈಡಲ್ ಮೇಕಪ್ ಜತೆಗೆ ಫೇಸ್‌ಬುಕ್ ಹಾಗೂ ಇನ್ಟ್ಟಾಗ್ರಾಮ್ ನಲ್ಲಿ ರೀಲ್ಸ್ ಶೇರ್ ಮಾಡುತ್ತಿದ್ದಳು. ಈ ನಡುವೆ ಪ್ರತಿಮಾಳಿಗೆ ಕಾರ್ಕಳದ ದಿಲೀಪ್ ಹೆಗ್ಡೆ ಇನ್ಸಾ÷್ಟಗ್ರಾಮ್ ಮೂಲಕ ಪರಿಚಯವಾಗಿದ್ದ, ಇವರ ಪರಿಚಯ ದಿನೇದಿನೇ ತೀರಾ ಆತ್ಮೀಯತೆಯ ಹಂತಕ್ಕೆ ತಲುಪಿತ್ತು, ಕೊನೆಗೂ ಇಬ್ಬರ ಅನೈತಿಕ ಸಂಬಂಧ ಗಂಡನಿಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಪತ್ನಿಯ ಪರಸಂಗದ ವಿಚಾರ ಗಂಡ ಬಾಲಕೃಷ್ಣ ಪೂಜಾರಿಗೆ ತಿಳಿಯುತ್ತಲೇ ಆಕೆಯ ಅಣ್ಣ ಸಂದೀಪ್ ಪೂಜಾರಿಗೆ ವಿಷಯ ತಿಳಿಸಿದಾಗ ಈ ವಿಚಾರ ಅಜೆಕಾರು ಪೊಲೀಸ್ ಠಾಣೆಗೂ ತಲುಪಿ ರಾದ್ದಾಂತ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಪ್ರತಿಮಾ ಠಾಣೆಯಲ್ಲೇ ತನ್ನ ಪ್ರಿಯಕರನ ಪರವಾಗಿ ನಿಂತಾಗ ಆಕೆಯ ಅಣ್ಣ ಸಂದೀಪ್ ಆಕ್ರೋಶಗೊಂಡು ಠಾಣೆಯಲ್ಲೇ ಕೆನ್ನೆಗೆ ಹೊಡೆದಿದ್ದ ಘಟನೆಯೂ ನಡೆದಿತ್ತು. ಈ ಪ್ರಕರಣದ ಬಳಿಕ ಸೈಲೆಂಟ್ ಆಗಿದ್ದ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಗಂಡನ ಕಥೆ ಮುಗಿಸಲು ಸ್ಲೋ ಪಾಯಿಸನ್ ಪ್ಲಾನ್ ಸಿದ್ದಪಡಿಸಿದ್ದರು. ಪ್ರಿಯಕರ ದಿಲೀಪ್ ಹೆಗ್ಡೆ ತಂದುಕೊಟ್ಟಿದ್ದ ಸ್ಲೋಪಾಯಿಸನ್ ಅನ್ನು ಪ್ರತಿಮಾ ತನ್ನ ಗಂಡನಿಗೆ ಊಟದಲ್ಲಿ ಬೆರೆಸಿಕೊಟ್ಟಿದ್ದಾಳೆ ಎಂಬುವುದಾಗಿ ಆಕೆಯ ಅಣ್ಣ ಸಂದೀಪ್ ಜತೆ ಹೇಳಿ ತನ್ನ ತಪ್ಪಾಗಿದೆ ಕ್ಷಮಿಸು ಎಂದು ಗೋಗರೆದಿದ್ದಾಳೆ.
ಸ್ಲೋ ಪಾಯಿಸನ್ ಪರಿಣಾಮವಾಗಿ ಬಾಲಕೃಷ್ಣ ಪೂಜಾರಿ ಆರೋಗ್ಯ ದಿನೇದಿನೇ ಹದಗೆಟ್ಟ ಹಿನ್ನಲೆಯಲ್ಲಿ ಅವನ ಮನೆಯವರು ಹಾಗೂ ಪತ್ನಿಯ ಅಣ್ಣ ಲಕ್ಷಾಂತರ ರೂ ಖರ್ಚು ಮಾಡಿ ಕೊನೆಗೂ ಗುಣಪಡಿಸಿ ಮನೆಗೆ ಕರೆತಂದಿದ್ದರು. ಇನ್ನು ಆತ ಗುಣಮುಖವಾದರೆ ನಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಅರಿತ ಪ್ರತಿಮಾ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ತನ್ನ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಕರೆಸಿ ಇಬ್ಬರು ಸೇರಿ ಅಸಹಾಯಕ ಸ್ಥಿತಿಯಲಿದ್ದ ಗಂಡನನನ್ನು ದಿಂಬಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಗಂಡ ಸತ್ತ ಎಂದು ಪ್ರತಿಮಾ ಬೊಬ್ಬೆ ಹಾಕಿ ನಾಟಕವಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಒಟ್ಟಿನಲ್ಲಿ ಕರಿಮಣಿ ಮಾಲೀಕ ನೀನಲ್ಲ ಎನ್ನುವ ರೀಲ್ಸ್ ಮೂಲಕ ಪರೋಕ್ಷವಾಗಿ ನಿನ್ನ ಕಥೆಯನ್ನೇ ಮುಗಿಸುವ ಕುರಿತು ರೀಲ್ಸ್ ನಲ್ಲೇ ಎಚ್ಚರಿಕೆ ನೀಡಿದಳಾ ಎನ್ನುವ ಸಂಶಯವೂ ಕೂಡ ಇದೀಗ ಕಾಡಲಾರಂಭಿಸಿದೆ
ಅಜೆಕಾರು ಪೊಲೀಸರು ಆರೋಪಿಗಳಾದ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಬಂಧಿಸಿ ಮಹಜರು ಬಾಲಕೃಷ್ಣ ಪೂಜಾರಿ ಮನೆಗೆ ಕರೆದೊಯ್ದು ಮಹಜರು ನಡೆಸಿದ್ದು ಈ ಪ್ರಕರಣದ ಕುರಿತು ಪ್ರಬಲ ಸಾಕ್ಷö್ಯಗಳನ್ನು ಕಲೆ ಹಾಕುತ್ತಿದ್ದಾರೆ. ವಿಪರೀತ ರೀಲ್ಸ್ ಹುಚ್ಚಾಟ ಹಾಗೂ ಕ್ಷಣಿಕ ಸುಖಕ್ಕಾಗಿ ಪತಿಯನ್ನೇ ಬಲಿಪಡೆದ ಪ್ರತಿಮಾಳಿಂದ ಆಕೆಯ ಮಕ್ಕಳೂ ಕೂಡ ದೂರಾಗಿದ್ದು, ಬಂಗಾರದಂತಹ ಸಂಸಾರವನ್ನು ಅವಳ ಕೈಯಿಂದ ಹಾಳು ಮಾಡಿಕೊಂಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

 

 

 

Leave a Reply

Your email address will not be published. Required fields are marked *