ಘಟನೆಯ ಹಿನ್ನೆಲೆ:
ಮೃತ ಬಾಲಕೃಷ್ಣ ಪೂಜಾರಿ ಹಾಗೂ ಅವರ ಪತ್ನಿ ಪ್ರತಿಮಾ ತಮ್ಮ ಇಬ್ಬರು ಮಕ್ಕಳ ಜತೆ ಅನ್ಯೋನವಾಗಿದ್ದರು.ಮದುವೆಯಾದ ಬಳಿಕ ಬಾಲಕೃಷ್ಣ ಪೂಜಾರಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಮುಂಬಯಿನಲ್ಲಿ ನೆಲೆಸಿದ್ದರು. ಕೋವೀಡ್ ಬಳಿಕ ಊರಿಗೆ ಬಂದು ಜೀವನ ನಿರ್ವಹಣೆಗೆಂದು ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಟೀನ್ ನಡೆಸುತ್ತಿದ್ದರು. ಪತ್ನಿ ಮಕ್ಳಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಬಾಲಕೃಷ್ಣ ಕಳೆದ ನವೆಂಬರ್ ನಲ್ಲಿ ಹೊಸ ಮನೆಯನ್ನೂ ಕಟ್ಟಿಸಿದ್ದರು.ಬಳಿಕ ಪತ್ನಿ ಪ್ರತಿಮಾಳಿಗೆ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಹಾಕಿಸಿಕೊಟ್ಟಿದ್ದರು. ತಾನು ಕ್ಯಾಂಟೀನಲ್ಲಿ ದುಡಿಯುತ್ತಿದ್ದರೂ ಪತ್ನಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ಪತ್ನಿಯ ಪರಸಂಗಕ್ಕೆ ಕಾರಣವಾದ ಇನ್ಟ್ಟಾಗ್ರಾಮ್:ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪತ್ನಿಯ ಲವ್ ಕಹಾನಿ!
ಬಾಲಕೃಷ್ಣ ಪೂಜಾರಿ
ತಾನು ಕ್ಯಾಂಟೀನಿನಲ್ಲಿ ದುಡಿಯುತ್ತಿದ್ದರೂ ಪತ್ನಿ ಹಾಗೂ ಮಕ್ಕಳಿಗೆ ಏನೂ ಕಡಿಮೆ ಮಾಡಿರಲಿಲ್ಲ.ಅಜೆಕಾರಿನಲ್ಲಿ ಪ್ರತಿಮಾಸ್ ಮೇಕ್’ಓವರ್ ಎನ್ನುವ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಪ್ರತಿಮಾ ಫೇಸ್ಬುಕ್ ಹಾಗೂ ಇನ್ಟ್ಟಾಗ್ರಾಮ್ ನಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದಳು. ರೀಲ್ಸ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಆರೋಪಿ ಪ್ರತಿಮಾ ಫೇಸ್ಬುಕ್ ಹಾಗೂ ಇನ್ಟ್ಟಾಗ್ರಾಮ್ ನಲ್ಲಿ ‘ಪ್ರತಿ ಮೇಕ್’ಓವರ್’ ಎಂಬ ಪೇಜ್ ತೆರೆದು ತನ್ನ ಡಿಫರೆಂಟ್ ರೀಲ್ಸ್’ಗಳನ್ನು ಅಪಲೋಡ್ ಮಾಡುತ್ತಿದ್ದಳು. ಈ ನಡುವೆ ಪ್ರತಿಮಾಳಿಗೆ ಇನ್ಟ್ಟಾಗ್ರಾಮ್ ಮೂಲಕ ಕಾರ್ಕಳದ ಹೊಟೇಲ್ ಹಾಗೂ ಲಾಡ್ಜಿಂಗ್ ಮಾಲಕನ ಪುತ್ರ ದಿಲೀಪ್ ಹೆಗ್ಡೆ ಎಂಬಾತ ಸ್ನೇಹವಾಗಿದೆ.ಆರಂಭದಲ್ಲಿ ಪರಿಚಯ ಬಳಿಕ ಇದು ತೀರಾ ಸಲುಗೆಯ ಮಟ್ಟಕ್ಕೆ ಬೆಳೆದು ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೂ ಕಾರಣವಾಯಿತು. ಪತ್ನಿಯ ಕಳ್ಳಾಟದ ವಿಷಯ ತಿಳಿಯುತ್ತಿದ್ದಂತೆಯೇ ಪತಿ ಬಾಲಕೃಷ್ಣ ಪೂಜಾರಿ ಮಾನಸಿಕವಾಗಿ ಕುಗ್ಗಿದ್ದರು. ಈ ವಿಷಯವನ್ನು ಪತ್ನಿಯ ಅಣ್ಣನ ಗಮನಕ್ಕೆ ತಂದಿದ್ದರು. ಬಳಿಕ ಇವರಿಬ್ಬರ ಲವ್ ಕಹಾನಿ ಅಜೆಕಾರು ಪೊಲೀಸ್ ಠಾಣೆಗೂ ಹೋಗಿತ್ತು. ಬಳಿಕ ಇಬ್ಬರನ್ನು ಕರೆಸಿ ಮುಚ್ಚಳಿಕೆ ಬರೆಯಿಸಿ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದರು ಎಂದು ಪ್ರತಿಮಾ ಅಣ್ಣ ಸಂದೀಪ್ ಅವರು ನಡೆದಿದ್ದ ಘಟನೆಯನ್ನು ವಿವರಿಸಿದ್ದಾರೆ.
ಈ ಪ್ರಕರಣದ ಬಳಿಕ ಮಾನಸಿಕವಾಗಿ ಸಾಕಷ್ಟು ಜರ್ಜರಿತವಾಗಿದ್ದ ಬಾಲಕೃಷ್ಣ ಪೂಜಾರಿ ಏಕಾಎಕಿ ಅನಾರೋಗ್ಯಕ್ಕೀಡಾಗಿದ್ದರು. ಕೈಕಾಲಿನ ಸ್ವಾಧೀನ ಕಳೆದುಕೊಂಡ ಅವರನ್ನು ಕಾರ್ಕಳ ಹಾಗೂ ಮಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದ ಹಿನ್ನಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಪ್ರತಿಮಾಳ ಅಣ್ಣ ಸಂದೀಪ್ ಅವರೇ ತನ್ನ ಭಾವನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಸಿದ್ದರು.ಉದರ ಸಂಬಂಧಿತ ಕಾಯಿಲೆಯಿಂದ ಗುಣಮುಖರಾದ ಬಾಲಕೃಷ್ಣ ಪೂಜಾರಿ ಅವರನ್ನು ಕಳೆದ ಅ.19ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಅಜೆಕಾರಿಗೆ ಕರೆತರಲಾಗಿತ್ತು. ಆದರೆ ಕೈಕಾಲು ಬಲಹೀನವಾಗಿದ್ದರಿಂದ ಆಯುರ್ವೇದಿಕ್ ಚಿಕಿತ್ಸೆ ಪಡೆಯುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅ.19 ರ ಶನಿವಾರ ರಾತ್ರಿ ಬಾಲಕೃಷ್ಣ ಅವರನ್ನು ಮನೆಗೆ ಕರೆತಂದ ಬಳಿಕ ತಡರಾತ್ರಿ 12 ಗಂಟೆಯವರೆಗೂ ಸಂದೀಪ್ ತನ್ನ ಭಾವನ ಜತೆಗಿದ್ದು ತಾನೇ ಊಟ ಮಾಡಿಸಿದ್ದರು. ಬಳಿಕ ಬಾಲಕೃಷ್ಣ ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಸಂದೀಪ್ ತನ್ನ ಮನೆಗೆ ತೆರಳಿದ್ದರು. ಇತ್ತ ಮನೆಯಲ್ಲಿ ಬಾಲಕೃಷ್ಣ ಹಾಗೂ ಅವರ ಪತ್ನಿ ಪ್ರತಿಮಾ ಇಬ್ಬರೇ ಇದ್ದರು.ಬೆಳಗಿನ ಜಾವ 3 ಗಂಟೆಗೆ ಬಾಲಕೃಷ್ಣ ಪೂಜಾರಿ ಮೃತಪಟ್ಟ ವಿಚಾರ ತನ್ನ ತಂಗಿ ಕರೆ ಮಾಡಿ ತಿಳಿಸಿದ್ದಳು ಎಂದು ಅಂದು ನಡೆದ ಘಟನೆ ಕುರಿತು ಸಂದೀಪ್ ವಿವರಿಸಿದ್ದಾರೆ.
ಸಾವಿನ ಕುರಿತು ಹೆಚ್ಚಿದ ಅನುಮಾನ:
ಅಂದು ಮಧ್ಯರಾತ್ರಿ 12 ಗಂಟೆಯವರೆಗೂ ಭಾವ ಬಾಲಕೃಷ್ಣ ಜತೆಗಿದ್ದ ಸಂದೀಪ್ ಅವರು ತನ್ನ ಭಾವನ ಸಾವಿನ ಸುದ್ದಿ ಕೇಳಿ ದಂದಾಗಿ ಹೋಗಿದ್ದರು. ಇತ್ತ ಬಾಲಕೃಷ್ಣ ಪೂಜಾರಿ ಮನೆಯವರೂ ಕೂಡ ಸಾವಿನ ಕುರಿತು ಸಂಶಯವಿದೆ ಎಂದು ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಶವದ ಸ್ಯಾಂಪಲ್ ತೆಗೆದು FSL ಗೆ ಕಳುಹಿಸಿದ್ದರು.
ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಈ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು ಸಮಗ್ರ ತನಿಖೆಯ ಬಳಿಕ ಸತ್ಯಾಂಶ ಬಯಲಿ ಬರಬೇಕಿದೆ